ಮುಖ್ಯಮಂತ್ರಿ ಪದಕ ವಿಜೇತ ಅಧಿಕಾರಿಗೆ ಅಭಿನಂದನೆ

sanmana
ಅಗ್ನಿಶಾಮಕ ದಳ ಅಧಿಕಾರಿಯಾಗಿ ಸೇವೆಸಲ್ಲಿಸಿ ನಿವೃತ್ತರಾದ ಮನೋಹರ್ ಕೆ.ವಿ.ಅವರನ್ನು ಪಂಚಾಯಿತಿ
Published on

ಕಾಸರಗೋಡು: ಅಗ್ನಿಶಾಮಕ ದಳದ ಸೀನಿಯರ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿಗೊಂಡ ಗೋಳಿತ್ತಡ್ಕದ ಮನೋಹರ್ ಕೆ.ವಿ.ಅವರಿಗೆ ಎಣ್ಮಕಜೆ ಗ್ರಾಪಂ ವತಿಯಿಂದ ಅಭಿನಂದನಾ ಸಮಾರಂಭ ನಡೆಯಿತು.

ಕಳೆದ 26 ವರ್ಷಗಳಿಂದ ಕಾಸರಗೋಡು ಅಗ್ನಿಶಾಮಕ ದಳದ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವ ಅವರಿಗೆ ಉತ್ತಮ ಸೇವೆಗಾಗಿ 2023-24ನೇ ಸಾಲಿನಲ್ಲಿ ಮುಖ್ಯಮಂತ್ರಿ ಪದಕ ಲಭಿಸಿದೆ. ಪೆರ್ಲ ಸನಿಹದ ಗೋಳಿತ್ತಡ್ಕದಲ್ಲಿರುವ ಅವರ ಸ್ವಗೃಹಕ್ಕೆ ತೆರಳಿ ಪಂಚಾಯಿತಿ ಆಡಳಿತ ಸಮಿತಿ ವತಿಯಿಂದ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಯಿತು. ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್., ಮಾಜಿ ಉಪಾಧ್ಯಕ್ಷೆ ಆಯಿಷಾ ಎ.ಎ., ಸಾಮಾಜಿಕ ಕಾರ್ಯಕರ್ತ ಟಿ.ಪ್ರಸಾದ್, ಆಶ್ರಫ್ ಮರ್ತ್ಯ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net