ಅಭಿನಂದನಾ ಮಹಾಪುರ

2BLH3A
Published on

ಬೈಲಹೊಂಗಲ: ಡಾ.ಶಿವಾನಂದ ಭಾರತಿ ಶ್ರೀಗಳ ವರ್ಧಂತಿ ಮಹೋತ್ಸವದ ನಿಮಿತ್ತ ರಾಜ್ಯದ ಮತ್ತು ಹೊರ ರಾಜ್ಯದ ಭಕ್ತರು ಜನ್ಮದಿನ ಆಚರಿಸಿದರು. ಬೀದರದ ಸಿದ್ಧಾರೂಢ ಚಿದಂಬರ ಆಶ್ರಮದ ಶಿವಕುಮಾರೇಶ್ವರ ಸ್ವಾಮೀಜಿ ಅಧ್ಯಕ್ಷತೆಯಲ್ಲಿ ಡಾ.ಶಿವಾನಂದ ಭಾರತಿ ಸ್ವಾಮೀಜಿ ವರ್ಧಂತ್ಯುತ್ಸವ ಜರುಗಿತು. ಕೊಂಚಿಗೆ ತೊಡಿಸಿ ಜೋಗುಳ ಪದ ಹಾಡುತ್ತ ತೊಟ್ಟಿಲೋತ್ಸವ ಮಾಡಲಾಯಿತು. ಪುರಸಭೆ ಸದಸ್ಯ ಬಸವರಾಜ ಜನ್ಮಟ್ಟಿ, ಚೈತ್ರಾ ಜನ್ಮಟ್ಟಿ, ಶಿವಾನಂದ ಜನ್ಮಟ್ಟಿ, ಸಂಭ್ರಮ ಜನ್ಮಟ್ಟಿ ಹಾಗೂ ಜನ್ಮಟ್ಟಿ ಕುಟುಂಬಸ್ಥರಿಂದ ಹಾಗೂ ಭಕ್ತರಿಂದ ಅದ್ದೂರಿಯಾಗಿ ನಡೆದಿದ್ದನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡರು.

ಶ್ರೀಗಳ ಪಲ್ಲಕ್ಕಿ ಉತ್ಸವ: ಡಾ.ಶಿವಾನಂದ ಭಾರತಿ ಸ್ವಾಮೀಜಿಯ ಪಲ್ಲಕ್ಕಿ ಮೆರವಣಿಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಸುವ ಮೂಲಕ ವರ್ಧಂತ್ಯುತ್ಸವ ಆಚರಿಸಲಾಯಿತು. ಸರ್ವಧರ್ಮ ಸಾಮೂಹಿಕ ವಿವಾಹವು ಸರ್ವ ಪೂಜ್ಯರ ಸಾನ್ನಿಧ್ಯದಲ್ಲಿ ಜರುಗಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net