

ಭಟ್ಕಳ: ಕಳೆದ 40 ವರ್ಷಗಳಿಂದ ರಸ್ತೆ ಸೌಕರ್ಯ ಇಲ್ಲದ ಪಟ್ಟಣದ ಸುಭಾಶ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸಲು ಸಚಿವ ಮಂಕಾಳ ವೈದ್ಯ ಅವರ ವಿಶೇಷ ಪ್ರಯತ್ನ ಕಾರಣ ಎಂದು ಜಿಎಸ್ಬಿ ಸಮಾಜದ ಪ್ರಮುಖ ಅಚ್ಯುತ ಕಾಮತ ಹೇಳಿದರು.
ಭಾನುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸಚಿವ ಮಂಕಾಳ ವೈದ್ಯ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿದರು.
ಪಟ್ಟಣದ ಹೃದಯಭಾಗದಲ್ಲಿ ಇದ್ದರೂ ಇಲ್ಲಿನ ನಿವಾಸಿಗಳು ಕನಿಷ್ಠ ರಸ್ತೆ, ಚರಂಡಿ ಸೇರಿ ಮೂಲ ಸೌಕರ್ಯದಿಂದ ವಂಚಿತರಾಗಿದ್ದರು. ಹಲವಾರು ಬಾರಿ ಕಚೇರಿ ಅಲೆದೂ ರಸ್ತೆ ನಿರ್ವಿುಸುವಂತೆ ಮನವಿ ನೀಡಿದರೂ ಪ್ರಯೋಜನವಾಗಿರಲಿಲ್ಲ. ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಮಂಕಾಳ ವೈದ್ಯ ಅವರಿಗೆ ಈ ಕುರಿತು ಮನವಿ ಮಾಡಿದಾಗ ರಸ್ತೆ ನಿರ್ವಿುಸಿಕೊಡುವ ಭರವಸೆ ನೀಡಿದ್ದರು. ಅದರಂತೆ ಅವರು ಸಚಿವರಾದ ಬಳಿಕ ನಮ್ಮ ಬೇಡಿಕೆಗೆ ಸ್ಪಂದಿಸಿದ್ದು, 1 ಕೋಟಿ ರೂ. ಅನುದಾನ ಮಂಜೂರಿ ಮಾಡಿಸುವ ಭರವಸೆ ನೀಡಿದ್ದು, ಸಂತಸ ತಂದಿದೆ ಎಂದರು.
ಶ್ರೀಧರ ಶಾನಭಾಗ, ಪದ್ಮನಾಭ ಪೈ, ನಾಗೇಶ ಭಟ್, ಪ್ರಮೋದ ಬಡಾಳ, ರಾಮು ಕಾಮತ, ಪ್ರಸನ್ನ ನಾಯಕ, ಶ್ರೀನಾಥ ಪೈ, ರಾಮಚಂದ್ರ ಕಿಣಿ, ಉದಯ ಪೈ, ಗುರುಪ್ರಸಾದ ಪಡಿಯಾರ, ಸಂತೋಷ ಶಾನಭಾಗ ಇದ್ದರು.