ಡಿ.5ರಂದು ಪ್ರೊ.ಶ್ರೀ ಕೃಷ್ಣಭಟ್ ಅಭಿನಂದನೆ: ಸಮಿತಿ ಮಹಾಸಭೆಯಲ್ಲಿ ನಿರ್ಧಾರ

Published on

ಕಾಸರಗೋಡು: ನಿವೃತ್ತ ಪ್ರಾಧ್ಯಾಪಕ ಪ್ರೊ.ಪಿ.ಶ್ರೀಕೃಷ್ಣ ಭಟ್ ಅಭಿನಂದನಾ ಸಮಿತಿಯ ಮಹಾಸಭೆ ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್‌ಸೆಕೆಂಡರಿ ಶಾಲೆಯಲ್ಲಿ ಜರುಗಿತು. ಪ್ರೊ.ಪಿ.ಎನ್.ಮೂಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಪಿ.ಶ್ರೀಕೃಷ್ಣ ಭಟ್ ಅವರಿಗೆ ಅಭಿನಂದನಾ ಸಮಾರಂಭವನ್ನು ಡಿ.5ರಂದು ನೀರ್ಚಾಲು ಶಾಲೆಯಲ್ಲಿ ಆಯೋಜಿಸಲು ತೀರ್ಮಾನಿಸಲಾಯಿತು.

ಕಾರ್ಯಕ್ರಮ ಸಂಯೋಜನಾ ಸಮಿತಿ ಸಂಚಾಲಕ ಡಾ.ರಾಧಾಕೃಷ್ಣ ಬೆಳ್ಳೂರು ಕಾರ್ಯಕ್ರಮದ ಸ್ವರೂಪ ಹಾಗೂ ಅಭಿನಂದನಾ ಗ್ರಂಥ ವಿನ್ಯಾಸದ ಕುರಿತು ಪ್ರಧಾನ ಸಂಪಾದಕಿ ಡಾ.ಯು.ಮಹೇಶ್ವರಿ ವಿವರಿಸಿದರು. ಗ್ರಂಥಕ್ಕೆ ‘ಶ್ರೀಪಥ’ ಹೆಸರಿಡಲು ತೀರ್ಮಾನಿಸಲಾಯಿತು.

ಸಮಾರಂಭದ ಯಶಸ್ವಿಗಾಗಿ ವಿವಿಧ ಉಪಸಮಿತಿ ರಚಿಸಲಾಯಿತು. ಸ್ವಾಗತ ಸಮಿತಿಗೆ ಸಂಚಾಲಕರಾಗಿ ಡಾ.ಕೆ.ಸುಬ್ರಹ್ಮಣ್ಯ ಭಟ್, ಆಹಾರ ಸಮಿತಿಗೆ ಸಂಚಾಲಕರಾಗಿ ಡಾ.ಶಶಿರಾಜ ನೀಲಂಗಳ, ಪ್ರಚಾರ ಮತ್ತು ದಾಖಲೀಕರಣ ಸಮಿತಿಗೆ ಸಂಚಾಲಕರಾಗಿ ಉದಯ ಕಂಬಾರ್, ವೇದಿಕೆ ಸಮಿತಿಗೆ ಸಂಚಾಲಕರಾಗಿ ಡಾ.ಮಹಮ್ಮದಲಿ ಕೆ, ಪುಸ್ತಕ ಪ್ರದರ್ಶನ ಸಮಿತಿಗೆ ಸಂಚಾಲಕರಾಗಿ ಲಕ್ಷ್ಮೀ ಕೆ. ಅವರನ್ನು ಆಯ್ಕೆ ಮಾಡಲಾಯಿತು.

ನೀರ್ಚಾಲು ಶಾಲೆಯ ಪ್ರಬಂಧಕ ಜಯದೇವ ಖಂಡಿಗೆ ಉಪಸ್ಥಿತರಿದ್ದರು. ಅಭಿನಂದನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಮುಳ್ಳೇರಿಯಾ ಸ್ವಾಗತಿಸಿದರು. ಆರ್ಥಿಕ ಸಮಿತಿ ಸಂಚಾಲಕ ವಿಶಾಲಾಕ್ಷ ಪುತ್ರಕಳ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net