ಅಭಿನಂದನಾ ಸಮಾರಂಭ 19ರಂದು

01
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಶಶಿ ಸಾಲಿ ಅಭಿನಂದನಾ ಸಮಿತಿ, ಡಾ. ಎಂ.ಎಂ. ಕಲಬುಗಿರ್ ಅಧ್ಯಯನ ಸಂಸ್ಥೆ ಹಾಗೂ ಗದುಗಿನ ತೋಂಟದಾರ್ಯ ಮಠದ ವತಿಯಿಂದ ಮೇ 19ರಂದು ಸಂಜೆ 5 ಗಂಟೆಗೆ ನಗರದ ಸೃಜನಾ ರಂಗ ಮಂದಿರದಲ್ಲಿ ಛಾಯಾಗ್ರಾಹಕ ಶಶಿ ಸಾಲಿ ಅವರಿಗೆ ಅಭಿನಂದನೆ ಹಾಗೂ ನೆನಪು ಹರಿಗೋಲು ಕೃತಿ ಬಿಡುಗಡೆ ಸಮಾರಂಭ ಆಯೋಜಿಸಲಾಗಿದೆ ಎಂದು ಸಮಿತಿ ಕಾರ್ಯದಶಿರ್ ಪ್ರೊ. ಶಶಿಧರ ತೋಡಕರ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದುಗಿನ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಭಾಪತಿ ಬಸವರಾಜ ಹೊರಟ್ಟಿ ಕೃತಿ ಬಿಡುಗಡೆ ಮಾಡುವರು. ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಪ್ರಧಾನ ಸಂಪಾದಕರ ಮಾತುಗಳನ್ನಾಡುವರು. ಕರ್ನಾಟಕ ವಿಶ್ವವಿದ್ಯಾಲಯ ನಿವೃತ್ತ ಪ್ರಾಧ್ಯಾಪಕ ಶಾಂತಿನಾಥ ದಿಬ್ಬದ ಅಭಿನಂದನಾ ಭಾಷಣ ಮಾಡುವರು. ತೋಂಟದಾರ್ಯ ವಿದ್ಯಾಪಿಠದ ಕಾರ್ಯದಶಿರ್ ಶಿವಾನಂದ ಪಟ್ಟಣಶೆಟ್ಟಿ, ಸಂಗೀತ ಕಲಾವಿದೆ ಸಂಗೀತಾ ಕಟ್ಟಿ ಪಾಲ್ಗೊಳ್ಳುವರು. ಮಾಜಿ ಸಂಸದ ಐ.ಜಿ. ಸನದಿ ಅಧ್ಯಕ್ಷತೆ ವಹಿಸುವರು ಎಂದರು.
ಸಮಿತಿ ಅಧ್ಯಕ್ಷ ಸಿದ್ಧಲಿಂಗ ಪಟ್ಟಣಶೆಟ್ಟಿ, ಸದಸ್ಯರಾದ ವೀರಣ್ಣ ರಾಜೂರ, ಶಿವಶಂಕರ ಹಿರೇಮಠ, ಜಿ.ಎಂ. ಹೆಗಡೆ, ಪ್ರತಾಪ ಬಹುರೂಪಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net