

ಕೊಳ್ಳೇಗಾಲ: ಪಟ್ಟಣದ ಬಸವೇಶ್ವರ ನಗರದಲ್ಲಿ ಸೋಮವಾರ ಚಾಮರಾಜನಗರ ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಆಯ್ಕೆ ಯಾದ ಮಧುವನಹಳ್ಳಿ ನಂಜುಂಡಸ್ವಾಮಿ ಅವರನ್ನು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪದಾಧಿಕಾರಿಗಳು ಸನ್ಮಾನಿಸಿ ಅಭಿನಂದನೆ ಸಲ್ಲಿಸಿದರು.
ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸೊಸೈಟಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನಂಜುಂಡಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿ ಹಾರ ಹಾರ, ಶಾಲು ಹಾಕಿ ಗೌರವಿಸಿದರು.
ಈ ಸಂದರ್ಭದಲ್ಲಿ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಎಂ. ಮಹಾದೇವಪ್ಪ, ಉಪಾಧ್ಯಕ್ಷ ಎಂ.ಶೀಲಾ, ನಿರ್ದೇಶಕ ಪಿ.ಬಿ.ಚಿಕ್ಕಬಸವೇಗೌಡ, ಎಸ್.ಶಿವಮೂರ್ತಿ, ಪಿ.ಮಹಾದೇವಸ್ವಾಮಿ, ಕೆ.ಎಸ್.ಮಹೇಶ್, ಎಸ್.ರಮೇಶ್, ಪಿ.ಸೋ ಮಶೇಖರ್,ಮಹೇಶ್, ಪಿ.ಬಾಲಸುಬ್ರಹ್ಮಣ್ಯಸ್ವಾಮಿ, ಶೈಲಜಾ, ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ನಾಗರಾಜು ಇದ್ದರು.