‘ಕಾನ್ಗೋಡ್’ ಚಲನಚಿತ್ರ ಪ್ರದರ್ಶನ

Kangodu Film
Published on

ಶಿರಸಿ: ಖ್ಯಾತ ನಿರ್ದೇಶಕ ಸೋಮಶೇಖರ ಆರಾಧ್ಯ ಅವರು ಶ್ರೀಅನ್ನಪೂರ್ಣೆಶ್ವರಿ ಸ್ಟುಡಿಯೊ ಬ್ಯಾನರ್ ಅಡಿ ನಿರ್ವಿುಸಿರುವ ಕಾನ್ಗೋಡ್ ಕೊಂಕಣಿ ಚಲನಚಿತ್ರದ ಪ್ರಥಮ ಪ್ರದರ್ಶನವನ್ನು ಶಿರಸಿಯ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಏ.13ರ ಸಂಜೆ 6 ಗಂಟೆಗೆ ಏರ್ಪಡಿಸಲಾಗಿದೆ.

ಉ.ಕ. ಜಿಲ್ಲಾ ಕೊಂಕಣಿ ಪರಿಷತ್ ಹಾಗೂ ತಾಲೂಕು ಜಿಎಸ್​ಬಿ ಸೇವಾವಾಹಿನಿಯ ಆಶ್ರಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಶ್ರೀಮಹಾವಿಷ್ಣು ವೆಂಕಟರಮಣ ದೇವಾಲಯಗಳ ಮೊಕ್ತೇಸರ ವಿಷ್ಣುದಾಸ ಕಾಸರಕೋಡ ಉದ್ಘಾಟಿಸುವರು. ಉ.ಕ. ಜಿಲ್ಲಾ ಕೊಂಕಣಿ ಪರಿಷತ್ ಅಧ್ಯಕ್ಷ ನಿತಿನ್ ಕಾಸರಕೋಡ, ಕಾರ್ಯದರ್ಶಿ ಜಗದೀಶ ನಾ, ಜಿಎಸ್​ಬಿ ಸೇವಾವಾಹಿನಿಯ ಅಧ್ಯಕ್ಷ ವಾಸುದೇವ ಶಾನಭಾಗ, ಕಾರ್ಯದರ್ಶಿ ಪ್ರಕಾಶ ನೇತ್ರಾವಳಿ ಇತರರು ಉಪಸ್ಥಿತರಿರುವರು.

ಚಿತ್ರದಲ್ಲಿ ಸ್ಥಳೀಯ ಕಲಾವಿದರಾದ ವಾಸುದೇವ ಶಾನಭಾಗ, ಶಿರಸಿ ಮಂಜು, ಅನಿಲ ನಾಯಕ, ರಾಮಚಂದ್ರ ಪೈ, ಆನಂದ ಕಾಮತ್, ಶಾಂತಾರಾಮ ಶೆಟ್ಟಿ, ಡಾ. ಅಜಿತ ಧಾಕಪ್ಪಾ, ಶಾಂತಾರಾಮ ಪೈ, ಕಾಶಿನಾಥ ಕಾನಡೆ, ಶಾಂತಾರಾಮ ಹೆಗಡೆ ಸುಗಾವಿ, ಸುಕನ್ಯಾ ಮಳಗೀಕರ್, ಕುಸುಮಾ ಎಸ್.ಜಿ., ಮಾ. ಅಭಯ ಮುಂತಾದವರು ನಟಿಸಿದ್ದಾರೆ. ಪ್ರದರ್ಶನ ಸಂಪೂರ್ಣ ಉಚಿತ ಎಂದು ಸಂಘಟಕರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net