ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ

h2-Congress 1
Published on

ಹುಬ್ಬಳ್ಳಿ: ಪ್ರತಿ ಸಿಲಿಂಡರ್ ಅಡುಗೆ ಅನಿಲ ಬೆಲೆಯಲ್ಲಿ 50 ರೂ. ಏರಿಕೆ ಮಾಡಿರುವುದನ್ನು ಖಂಡಿಸಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ನಗರದ ಕೇಶ್ವಾಪುರ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.</p><p>ರಸ್ತೆ ಮಧ್ಯೆ ಕಟ್ಟಿಗೆ, ಉರುವಲು ಬಳಸಿ ಬೆಂಕಿ ಹಚ್ಚಿ ಪಲಾವ್ ಮಾಡಿದರು. ಖಾಲಿ ಸಿಲಿಂಡರ್ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರದ ವಿರುದ್ಧ ಘೊಷಣೆ ಕೂಗಿದರು.</p><p>ವಿದ್ಯಾನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಬಾಳಮ್ಮ ಜಂಗನವರ್, ಉಣಕಲ್ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜ್ಯೋತಿ ವಾಲಿಕರ್, ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ, ಕಲಾವತಿ ದತ್ತವಾಡ, ಗೀತಾ ಪಾಟೀಲ, ಸುನೀಲ ಮಠಪತಿ, ಬಸವರಾಜ ತಮ್ಮಣ್ಣವರ್, ಬಸವರಾಜ ಮೈಗೇಡಿ, ಅಬ್ಬಾಸ್ ಯರಗಟ್ಟಿ, ದ್ಯಾಮವ್ವ ಇಟ್ಟಿ, ಸರೋಜಾ ಚಲವಾದಿ, ಗೀತಾ ದಂಡಪ್ಪನವರ್ ಶ್ವೇತಾ ದಂಡಪ್ಪನವರ್, ರಾಧಾ ಪವಾರ್, ಸಾವಿತ್ರಿ ದೊಡ್ಮನಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net