ಕಾಂಗ್ರೆಸ್​ನಿಂದ ವಿಜಯೋತ್ಸವ ಆಚರಣೆ

cong vijayotsava
Published on

ಹುಬ್ಬಳ್ಳಿ: ರಾಜ್ಯ ಸರ್ಕಾರದ ಗೃಹ ಜ್ಯೋತಿ ಯೋಜನೆಯಡಿ ಆಗಸ್ಟ್ ತಿಂಗಳಿಂದ ವಿದ್ಯುತ್ ಬಳಕೆದಾರರಿಗೆ ಉಚಿತ ವಿದ್ಯುತ್ ಬಿಲ್ ಜಾರಿಯಾದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಗುರುವಾರ ವಿಜಯೋತ್ಸವ ಆಚರಿಸಿದರು.

ಕಾರವಾರ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಉಚಿತ ವಿದ್ಯುತ್ ಬಿಲ್ ಗಳನ್ನು ಪ್ರದರ್ಶಿಸುವ ಮೂಲಕ ಸಂಭ್ರಮ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನವೀದ್ ಮುಲ್ಲಾ, ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ದೊಡ್ಡರಾಮಪ್ಪ ದೊಡ್ಡಮನಿ, ವೀರಣ್ಣ ಹಿರೇಹಾಳ, ರಫೀಕ ಚವ್ಹಾಣ, ಅಜರ್ ಮರ್ಚೆಂಟ್, ಸುರೇಶ ದಿಡ್ಡಿಮನಿ, ಸಲೀಂ ಬೆಳಗಾವಿ, ಶ್ರೀಧರ ನಾಯ್ಕರ, ಪ್ರಶಾಂತ ಬಾವೂರ, ಸುಜಾತಲಿ ಹೊಸಮನಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net