

ರಾಮನಗರ: ನೀರಾವರಿ ಸೇರಿ ತಾಲೂಕಿನ ಸಮಗ್ರ ನೀರಾವರಿ ಜಾರಿಗಾಗಿ ಹೋರಾಟ ವಾಡುತ್ತಿದ್ದರೆ, ಜೆಡಿಎಸ್ ಕುಟುಂಬದ ಕುಡಿಯ ಪಟ್ಟಾಭಿಷೇಕಕ್ಕಾಗಿ ಹೋರಾಟ ವಾಡುತ್ತಿದೆ, ಇದರಲ್ಲಿ ಯಾರು ಹಿತವರು ಎಂದು ಯೋಚಿಸಿ ಮತ ಚಲಾಯಿಸುವಂತೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಮನವಿ ಮಾಡಿಕೊಂಡರು.
ತಾಲೂಕಿನ ಹುಣಸನಹಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ತಿಗಳ ಸಮುದಾಯ ಮುಖಂಡರ ಸಭೆಯಲ್ಲಿ ಮಾತನಾಡಿ, ಬಿಸಲಮ್ಮ ನಮ್ಮ ಮನೆದೇವರು, ರಾಜಕೀಯ ಪ್ರಾರಂಭದ ದಿನಗಳಿಂದಲೂ ಈ ಜನಾಂಗ ನನ್ನ ಕೈ ಹಿಡಿದಿದ್ದು, ಈ ಬಾರಿಯು ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲಿರಲೆಂದು ಕೈ ಮುಗಿದು ಕೇಳಿಕೊಂಡರು.
ಉಪ ಚುನಾವಣೆ ನನ್ನ ರಾಜಕೀಯ ಜೀವನದ ಪ್ರಮುಖ ಟ್ಟ, ಈ ರಾಜಕೀಯ ದೈತ್ಯರು ಎರಡು ಬಾರಿ ನನ್ನ ಮೇಲೆ ನುಗ್ಗಿಬಂದು ಸೋಲಿಸಿ ಈಗ ಮೂರನೇ ಬಾರಿಗೆ ಅವರ ವಂಶದ ಕುಡಿಯನ್ನು ಕರೆ ತಂದಿದ್ದಾರೆ. ಇದೆಲ್ಲವನ್ನು ತಾಲೂಕಿನ ಸ್ವಾಭಿಮಾನಿ ಮತದಾರರು ಯೋಚಿಸಿ, ವಿವೇಚಿಸಿ ಮತ ಚಲಾಯಿಸಬೇಕೆಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ, ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಗೆಲುವು ಅನಿವಾರ್ಯವಾಗಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ನುಡಿದಂತೆ ನಡೆದಿರುವ ನಮ್ಮ ಸರ್ಕಾರ ಈಗಾಗಲೇ ತಾಲೂಕಿನ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂ. ಅನುದಾನ ಬಿಡುಗಡೆ ವಾಡಿದೆ. ಇದೆಲ್ಲವನ್ನು ಮತದಾರರು ಮರೆಯಬಾರದು ಎಂದರು.
2018 ರಿಂದ 2024ರವರೆಗೂ ಕುಮಾರಸ್ವಾಮಿ ಕ್ಷೇತ್ರದ ಶಾಸಕರು, ಜತೆಗೆ ಸಿಎಂ ಗಾದಿ ಅಲಂಕರಿಸಿದವರು, ಆದರೂ ಕ್ಷೇತ್ರ ಯಾಕೆ ಅಭಿವೃದ್ಧಿಯಾಗಿಲ್ಲ ಎಂದು ಮತದಾರರು ಕೇಳಬೇಕಿದೆ, ಚುನಾವಣೆಗಳು ಬಂದಾಗ ವಾತ್ರ ನಿಮ್ಮೂರುಗಳಿಗೆ ಬರುವ ಇವರನ್ನು ನಂಬದೆ ಸದಾ ನಿಮ್ಮ ಜತೆ ಇರುವ ನನಗೆ ಈ ಬಾರಿ ಅವಕಾಶ ಮಾಡಿಕೊಡುವಂತೆ ವಿನಂತಿಸಿಕೊಂಡರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, ಶಾಸಕ ಶರತ್ ಬಚ್ಚೇಗೌಡ, ನಂಜೇಗೌಡ, ಮಾಜಿ ಶಾಸಕ ನರೇಂದ್ರಸ್ವಾಮಿ, ಮಾಜಿ ಮೇಯರ್ ರಮೇಶ್, ಪದ್ಮಾವತಿ ಗಂಗಾಧರ್, ನಟ ಮಧನ್ ಪಟೇಲ್, ಜಿಲ್ಲಾಧ್ಯಕ್ಷ ಗಂಗಾಧರ್ ಸೇರಿ ಇತರರು ಇದ್ದರು.
ಕಾಂಗ್ರೆಸ್ ಸರ್ಕಾರದಿಂದ ವಾತ್ರ ಅಭಿವೃದ್ಧಿ: ಚನ್ನಪಟ್ಟಣ ಅಭಿವೃದ್ಧಿಗೆ ಸಾಕಷ್ಟು ಅನುದಾನ ಕೊಟ್ಟಿದ್ದೇವೆ. ಕಾಂಗ್ರೆಸ್ ಸರ್ಕಾರ ಇದ್ದರೆ ವಾತ್ರ ಅಭಿವೃದ್ಧಿ ಸಾಧ್ಯ, ಬಿಜೆಪಿಯಿಂದ ಅಭಿವೃದ್ಧಿ ಸಾಧ್ಯವಿಲ್ಲ, ರಾಜ್ಯದಲ್ಲಿ ಇನ್ನೂ ಮೂರುವರೆ ವರ್ಷ ಹಾಗೂ ಮುಂದಿನ ಐದು ವರ್ಷ ನಮ್ಮದೆ ಸರ್ಕಾರ ಇರುತ್ತದೆ. ತಿಗಳ ಸಮುದಾಯಕ್ಕೆ ರಾಜಕೀಯ ಶಕ್ತಿ ನೀಡಿದ್ದೆ ಕಾಂಗ್ರೆಸ್. ಹಾಗಾಗಿ ವದಂತಿಗಳಿಗೆ, ಆಸೆ ಆಮಿಷಗಳಿಗೆ ಬಲಿಯಾಗದೆ ಸಮುದಾಯ ಕಾಂಗ್ರೆಸ್ ಜತೆ ನಿಲ್ಲುವಂತೆ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಮನವಿ ವಾಡಿದರು.
ತಾಲೂಕಿನಲ್ಲಿ ನೀರಾವರಿ ಮಾಡುವುದರ ಜತೆಗೆ ನಿಮ್ಮೆಲ್ಲರನ್ನು ಒಟ್ಟಾಗಿ ಕರೆದುಕೊಂಡು ಹೋಗುವ ಯೋಗೇಶ್ವರ್ ಸರ್ವಜನಾಂಗದ ನಾಯಕನಾಗಿ ಗುರುತಿಸಿಕೊಂಡಿದ್ದು, ಇಂತಹ ವ್ಯಕ್ತಿ ನಿಮ್ಮ ಪ್ರತಿನಿಧಿಯಾಗಿ ವಿಧಾನಸೌಧದಲ್ಲಿ ಇದ್ದಾಗ ವಾತ್ರ ತಾಲೂಕಿನ ಸಮಗ್ರ ಅಭಿವೃದ್ಧಿ ಸಾಧ್ಯ ಎಂದರು.
ಅಧಿಕಾರಕ್ಕಾಗಿ ಹೋದವರಿಗೆ ಮತ ನೀಡ್ತಿರಾ: ತಾಲೂಕಿನಲ್ಲಿ ಗೆದ್ದು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ಕುಮಾರಸ್ವಾಮಿ, ಜನರ ನೀರಿಕ್ಷೆಗೆ ತಕ್ಕಂತೆ ಕೆಲಸ ಮಾಡದಿದ್ದರೂ ಮತ್ತೊಮ್ಮೆ ಅವರನ್ನು ತಾಲೂಕಿನ ಜನತೆ ಗೆಲ್ಲಿಸಿದ್ದಾರೆ. ಅಂತಹ ಜನತೆಯನ್ನು ಅಧಿಕಾರಕ್ಕಾಗಿ ಬಿಟ್ಟು ಮಂಡ್ಯಕ್ಕೆ ಹೋದ ಕುಮಾರಸ್ವಾಮಿ ಅವರು ಯಾವ ಮುಖವಿಟ್ಟು ಕೊಂಡು ಮತ ಕೇಳಲು ಬಂದಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಎಚ್ಡಿಕೆ ವಿರುದ್ಧ ಹರಿಹಾಯ್ದರು.
ನಿಖಿಲ್ ಎರಡು ಬಾರಿ ಸೋತಿದ್ದಾರೆ, ಮತ ಕೊಡಿ ಅಂತಾ ಕೇಳ್ತಿರಾ, ಏನೂ ಕೆಲಸ ವಾಡದ ನಿಖಿಲ್ ಎರಡು ಬಾರಿ ಸೋತಿದ್ದಾನೆಂದು ಮತ ಕೊಡುವುದಾದರೆ, ತಾಲೂಕಿನ ಕೆರೆ-ಕಟ್ಟೆಗಳನ್ನು ತುಂಬಿಸಿ, ತಾಲೂಕು ಹಸುರಿನಿಂದ ಕಂಗೊಳಿಸುವಂತೆ ವಾಡಿದ ಯೋಗೇಶ್ವರ್‌ಗೆ ಏನು ಕೊಡಬೇಕು ನೀವೇ ಹೇಳಿ ಎಂದು ಮತದಾರರನ್ನು ಪ್ರಶ್ನೆ ಮಾಡಿದರು.