ಮಡಿಕೇರಿಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ

17mdk06
Published on

ಮಡಿಕೇರಿ:
ನಗರದ ವಾರ್ಡ್ ನಂಬರ್ ೧೯ರಲ್ಲಿ ವಾರ್ಡ್ ಅಧ್ಯಕ್ಷ ಸುದಯ್ ನಾಣ್ಣಯ್ಯ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಮನೆ ಮನೆಗೆ ವಿತರಿಸಲಾಯಿತು. ಪ್ರತಿ ಮನೆಗೂ ಪ್ರತಿ ತಿಂಗಳು ೨೦೦ ಯೂನಿಟ್ ವಿದ್ಯುತ್ ಉಚಿತ ಹಾಗೂ ಕುಟುಂಬದ ಮಹಿಳೆಗೆ ಪ್ರತಿ ತಿಂಗಳು ೨೦೦೦ ಸಾವಿರ ರೂಪಾಯಿ ಉಚಿತ ಪ್ರತಿ ಕುಟುಂಬದ ಸದಸ್ಯರಿಗೆ ೧೦ ಕೆಜಿ ಅಕ್ಕಿ ನೀಡುವ ಬಗ್ಗೆ ಜನರಿಗೆ ತಿಳಿಸಲಾಯಿತು.


ವಾರ್ಡ್ ಉಪಾಧ್ಯಕ್ಷ ಟಿ. ಎಂ ಅಯ್ಯಪ್ಪ, ಡಿಸಿಸಿ ಸದಸ್ಯ ಟಿ.ಪಿ. ನಾಣ್ಣಯ್ಯ. ಸೇವಾದಳ ಜಿಲ್ಲಾಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ. ಬ್ಲಾಕ್ ಉಪಾಧ್ಯಕ್ಷ ಪ್ರಭು ರೈ, ಬ್ಲಾಕ್ ಸಂಘಟನಾ ಕಾರ್ಯದರ್ಶಿ ರವಿಗೌಡ, ಬ್ಲಾಕ್ ಕಾರ್ಯಕಾರಣಿ ಸಮಿತಿ ಸದಸ್ಯರಾದ ಲಿಲ್ಲಿಗೌಡ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net