ಕೊಡಗಿನ ಶಾಸಕರನ್ನು ಬೆಂಬಲಿಸಿ ಕಾಂಗ್ರೆಸ್ ಪ್ರತಿಭಟನೆ

cong
Published on

ಮಡಿಕೇರಿ:

ವಿನಯ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬAಧಿಸಿದAತೆ ಬಿಜೆಪಿ ಆರೋಪಗಳಿಗೆ ಪ್ರತಿಯಾಗಿ ಕೊಡಗಿನ ಶಾಸಕದ್ವಯರಿಗೆ ನೈತಿಕ ಬಲ ನೀಡುವ ಉದ್ದೇಶದಿಂದ ಭಾನುವಾರ ಮಡಿಕೇರಿ ಗಾಂಧಿ ಮೈದಾನದಲ್ಲಿ ಕಾಂಗ್ರೆಸ್ ಪ್ರತಿಭಟನಾ ಸಭೆ ಆಯೋಜಿಸಿತ್ತು. ಈ ಸಂದರ್ಭ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ. ಮುಖ್ಯಮಂತ್ರಿ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ, 'ವಿನಯ್ ಸೋಮಯ್ಯ ಸಾವಿಗೆ ಬಿಜೆಪಿಯೇ ಹೊಣೆ' ಎಂದು ಮೂರು ಬಾರಿ ಪುನರುಚ್ಚರಿಸುವ ಮೂಲಕ ಬಿಜೆಪಿ ವಿರುದ್ಧ ನೇರ ಆರೋಪ ಮಾಡಿದ್ದಾರೆ.

ಬಿಜೆಪಿ ಐಟಿ ಸೆಲ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವವರ ಕಾರ್ಯವೈಖರಿ ಎಲ್ಲರಿಗೂ ಗೊತ್ತಿರುವಂಥದ್ದೇ.. ಸುಳ್ಳನ್ನು ಸತ್ಯ ಎಂದು ಬಿಂಬಿಸುವುದರಲ್ಲಿ ಮತ್ತು ಅದನ್ನೇ ಪ್ರಚಾರ ಮಾಡುವುದರಲ್ಲಿ ಅವರು ನಿಸ್ಸೀಮರು. ಇಂಥ ಬಿಜೆಪಿ ಐಟಿ ಸೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ವಿನಯ್ ಒತ್ತಡ ತಡೆಯಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 'ಅವರಾಗಿಯೇ ಮಾಡಿಕೊಂಡರೋ ?. ಇವರೇ ಮಾಡಿಸಿದರಾ ? ಅಥವಾ ಇಂಥದ್ದೊAದು ಅವಕಾಶವನ್ನು ಬಿಜೆಪಿಗರೇ ಸೃಷ್ಟಿಸಿಕೊಂಡರಾ ?' ಎನ್ನುವುದು ತನಿಖೆ ಆಗಬೇಕು. ತನಿಖೆಯಿಂದ ಎಲ್ಲಾ ಸತ್ಯಾಂಶ ಹೊರಬರಲಿದೆ.

ವಿನಯ್ ಶವ ಇಟ್ಟು ಕುಶಾಲನಗರದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಕುಟುಂಬಸ್ಥರ ಮನವೊಲಿಸಿದ್ದು ನಾಚಿಕೆಗೇಡಿನ ವಿಷಯ. ಬಿಜೆಪಿಯಲ್ಲಿ ಯಾರಿಗೂ ವಿನಯ್ ಸೋಮಯ್ಯ ಸಾವಿನ ಮೇಲೆ ಕನಿಷ್ಠ ಸಂತಾಪ, ಶೋಕ ಇರಲಿಲ್ಲ. ಶೋಕಾಚರಣೆಗೆ ಅವಕಾಶ ಕೊಡದೇ ರಾಜಕೀಯ ಮಾಡಿದರು. ಹೆಣ ಇಟ್ಟುಕೊಂಡು ಕುಶಾಲನಗರದಲ್ಲಿ ಶನಿವಾರ ಮಧ್ಯಾಹ್ಮ ೧೨.೩೦ರ ತನಕ ನಾಟಕ ಮಾಡಿದರು. ಕೊನೆಗೆ ಕುಟುಂಬಸ್ಥರ ಒತ್ತಾಯದ ಮೇಲೆ ಹುಟ್ಟೂರಿಗೆ ತೆಗೆದುಕೊಂಡು ಹೋಗಲಾಯಿತು. ಪದ್ಧತಿ ಪ್ರಕಾರ ಸರಿಯಾಗಿ ಶವಸಂಸ್ಕಾರ ಮಾಡಲು ಕೂಡ ಅವಕಾಶ ಕೊಡದ ಇವರೆಲ್ಲಾ ಬೊಗಳೆ ಹಿಂದುವಾದಿಗಳು ಎಂದು ಹೇಳಿದರು.

ಇದಕ್ಕೂ ಮೊದಲು ಜ. ತಿಮ್ಮಯ್ಯ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಕೃತಿಗೆ ಚಪ್ಪಲಿ ಹಾರ ಹಾಕಿ, ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಪಕ್ಷದ ಪ್ರಮುಖರಾದ ಹೆಚ್.ಎಸ್. ಚಂದ್ರಮೌಳಿ, ಮಾಜಿ ಎಂಎಲ್‌ಸಿ ಅರುಣ್ ಮಾಚಯ್ಯ, ವೀಣಾ ಅಚ್ಚಯ್ಯ ಸೇರಿದಂತೆ ಪಕ್ಷದ ಪ್ರಮುಖರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net