ಎಪಿಎಲ್ ಕಾರ್ಡ್ ದಾರರ ಗೊಂದಲ ಕೊನೆಗಾಣಿಸಿ

23 Dwd 3
Published on

ಧಾರವಾಡ: ಕಳೆದ ಕೆಲ ತಿಂಗಳಿ0ದ ಎಪಿಎಲ್ ಕಾರ್ಡ್ ದಾರರಿಗೆ ಪಡಿತರವನ್ನು ನೀಡುತ್ತಿಲ್ಲ. ಪಡಿತರ ಅಂಗಡಿಯಲ್ಲಿ ವಿಚಾರಿಸಿದರೆ ಸರ್ಕಾರದಿಂದ ನಿಲ್ಲಿಸಲಾಗಿದೆ ಎಂಬ ಉತ್ತರ ಬರುತ್ತವೆ. ಆದರೆ, ಪಡಿತರವನ್ನು ಪಡೆದಿಲ್ಲ ಎಂಬ ಕಾರಣವೊಡ್ಡಿ ಮುಂದಿನ ದಿನಗಳಲ್ಲಿ ಪಡಿತರ ಚೀಟಿ ರದ್ದಾದರೆ ಆಶ್ಚರ್ಯವೇನಿಲ್ಲ. ಇದಕ್ಕೆ ಯಾರು ಹೊಣೆಗಾರರು? ಆಹಾರ ಇಲಾಖೆಯವರು ಇದಕ್ಕೆ ಉತ್ತರ ನೀಡಬೇಕಿದೆ.

ಈ ಬಗ್ಗೆ ಹಲವಾರು ಬಾರಿ ವಿಚಾರಿಸಿದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ಆದ್ದರಿಂದ ಸಂಬ0ಧಿಸಿದ ಅಧಿಕಾರಿಗಳು ಇದಕ್ಕೆ ಪರಿಹಾರ ಸೂಚಿಸಿದರೆ ಎಲ್ಲ ಪಡಿತರದಾರರಿಗೆ ಅನುಕೂಲವಾಗುತ್ತದೆ. ಅಥವಾ ಇದಕ್ಕೆ ಯಾವುದಾದರೂ ಆದೇಶವಿದ್ದರೆ ಎಲ್ಲರಿಗೂ ಮಾಹಿತಿ ನೀಡಬೇಕು ಎಂದು ಧಾರವಾಡದ ಪ್ರಸನ್ನಕುಮಾರ ಜೋಶಿ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net