ಉಡುಪಿ ಗಡಿಯಲ್ಲಿ ಗೊಂದಲ

gadi
Published on

ಪಡುಬಿದ್ರಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಗೊಳಿಸಿದ್ದು, ಉಡುಪಿ-ದ.ಕ.ಗಡಿಭಾಗದ ಹೆಜಮಾಡಿ ಪರಿಸರದಲ್ಲಿ ಗೊಂದಲ ಸೃಷ್ಟಿಸಿತು.

ಗಡಿ ತಪಾಸಣೆಯಲ್ಲಿ ತೊಡಗಿದ್ದ ಅಧಿಕಾರಿಗಳ ಮೇಲೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ರಾಜಕೀಯ ಮುಖಂಡರ ಪ್ರಭಾವ ಬೀರಿ ಉಡುಪಿಯಿಂದ ಜನರು ನಾನಾ ಸಬೂಬು ಹೇಳಿ ಮಂಗಳೂರಿನತ್ತ ತೆರಳುವ ಮೂಲಕ ಲಾಕ್‌ಡೌನ್ ಸಡಿಲಿಕೆ ದುರುಪಯೋಗಪಡಿಸಿಕೊಂಡರು.

ಮಂಗಳೂರು ಕಡೆ ಸಂಚರಿಸುವ ಭಾಗದಲ್ಲಿ ಕಟ್ಟುನಿಟ್ಟಾಗಿ ತಪಾಸಣೆ ನಡೆಸಿ ಕರ್ತವ್ಯ ಪಾಲಿಸುತ್ತಿದ್ದ ಆರೋಗ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಜನರ ಈ ವರ್ತನೆಯಿಂದ ಬೇಸರಗೊಂಡು ಕೆಲಕಾಲ ವಾಹನಗಳ ತಪಾಸಣೆ ಕೈಬಿಟ್ಟರು. ಕಳೆದೆರಡು ದಿನಗಳಿಗೆ ಹೋಲಿಸಿದಲ್ಲಿ ಮಂಗಳೂರು ಹಾಗೂ ಉಡುಪಿ ಕಡೆ ಸಂಚರಿಸುವ ವಾಹನಗಳ ಸಂಖ್ಯೆ ಹೆಚ್ಚಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net