ಕೊಲ್ಲೂರು ದೇವಸ್ಥಾನದಲ್ಲಿ ರಥೋತ್ಸವ ಗೊಂದಲ; ಶಾಸಕರಿಂದ ಸಂಪ್ರದಾಯ ಬದಲಾವಣೆ!?

Rathothsava
Published on

ಉಡುಪಿ: ಜಿಲ್ಲೆಯ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದಲ್ಲಿ ನವರಾತ್ರಿಯ ಮಹಾನವಮಿ ಪ್ರಯುಕ್ತ ಶನಿವಾರ ರಾತ್ರಿ ನಡೆದ ರಥೋತ್ಸವ ಈಗ ವಿವಾದಕ್ಕೆ ಈಡಾಗಿದೆ. ರಥೋತ್ಸವ ಸಂಬಂಧ ಸಂಪ್ರದಾಯ ಉಲ್ಲಂಘಿಸಲಾಗಿದೆ ಎಂಬ ಬೇಸರವೂ ವ್ಯಕ್ತವಾಗಿದೆ.

ಸಂಪ್ರದಾಯದ ಪ್ರಕಾರ ನವರಾತ್ರಿ ಸಂದರ್ಭ ಮಹಾನವಮಿಯಂದು ದೇವಸ್ಥಾನದಲ್ಲಿ ಪುಷ್ಪರಥವನ್ನು ಎಳೆಯಲಾಗುತ್ತದೆ. ಆದರೆ ಈ ಸಲ ಅದರ ಬದಲು ಸ್ವರ್ಣರಥವನ್ನು ಎಳೆಯಲಾಗಿದೆ. ಈ ಸಂಬಂಧ ಶಾಸಕ ಸುಕುಮಾರ ಶೆಟ್ಟಿ ಅವರ ವಿರುದ್ಧ ಬೇಸರ ಮೂಡಿದೆ ಎನ್ನಲಾಗುತ್ತಿದೆ.

ಸುಕುಮಾರ ಶೆಟ್ಟಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದವರು. ಅವರ ಕಾಲದಲ್ಲಿ ದೇವಸ್ಥಾನ್ಕಕ್ಕೆ ಚಿನ್ನದ ರಥ ಸಮರ್ಪಣೆ ಆಗಿತ್ತು. ಹೀಗಾಗಿ ಚಿನ್ನದ ರಥೋತ್ಸವ ನಡೆಸಲು ಶಾಸಕರು ಸೂಚನೆ ನೀಡಿದ್ದರು. ಹೀಗಾಗಿ ಗೊಂದಲ ಮೂಡಿದ್ದು, ಕೊನೆಗೆ ಚಿನ್ನದ ರಥೋತ್ಸವವೇ ಸುಸೂತ್ರವಾಗಿ ನಡೆದಿದೆ. ಆದರೆ ಸಂಪ್ರದಾಯ ಬದಲಿಸಿದ ಬಗ್ಗೆ ಕೆಲವರಿಂದ ಅಸಮಾಧಾನ ವ್ಯಕ್ತವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net