ಗೊಂದಲಕ್ಕೆ ಕಾರಣವಾದ ರಜೆ ಘೋಷಣೆ

Govt School
Published on

ಸುಂಟಿಕೊಪ್ಪ: ಸೋಮವಾರಪೇಟೆ, ಕುಶಾಲನಗರ ವ್ಯಾಪ್ತಿಯಲ್ಲಿ ಅಧಿಕ ಮಳೆಯ ಕಾರಣದಿಂದ ತಾಲೂಕು ತಹಸೀಲ್ದಾರ್ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಬುಧವಾರ ಬೆಳಗ್ಗೆ ರಜೆ ಘೋಷಣೆ ಮಾಡಿದರು. ಮಾಹಿತಿ ಇಲ್ಲದೆ ಶಾಲೆ ಆಗಮಿಸಿದ ವಿದ್ಯಾರ್ಥಿಗಳು ಗೊಂದಲಕ್ಕೆ ಒಳಗಾದರು.
ಮಂಗಳವಾರ ಸಂಜೆಯಿಂದ ಬಿರುಸಿನ ಗಾಳಿ ಸಹಿತ ಮಳೆಯು ರಾತ್ರಿಯಿಡಿ ಆರ್ಭಟಿಸಿತ್ತು. ಈ ಹಿನ್ನೆಲೆ ಶಾಲೆಗಳಿಗೆ ಬೆಳಗ್ಗೆ 7ಗಂಟೆ ವೇಳೆಗೆ ರಜೆ ಘೋಷಣೆ ಮಾಡಲಾಯಿತು. ಆದಾಗಲೇ ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮ ಊರು ಬಿಟ್ಟಿ ಶಾಲೆಯತ್ತ ಆಗಮಿಸಿದ್ದರು. ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ರಜೆ ವಿಚಾರ ತಿಳಿಯಿತು. ಇದರಿಂದ ಹೆಚ್ಚಿನ ಮಕ್ಕಳು ಬಸ್ ನಿಲ್ದಾಣದಲ್ಲಿ, ಮೈದಾನದಲ್ಲಿ ಕಾಲಕಳೆಯುವಂತಾಯಿತು.
ಮಳೆ ಬಿಡುವು ನೀಡಿದ್ದರಿಂದ ಸ್ಥಳೀಯ ಮಕ್ಕಳು ಮೈದಾನದಲ್ಲಿ ಕ್ರಿಕೇಟ್, ಬೈಸಿಕಲ್ ಓಡಿಸುತ್ತಾ ಕಾಲಕಳೆದ ದೃಶ್ಯ ಕಂಡುಬಂತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net