ಬಾಂಬೆ ಗಣೇಶಮೂರ್ತಿಗಳ ಜಪ್ತಿ

FotoJet
Published on

ದೊಡ್ಡಬಳ್ಳಾಪುರ: ಪರಿಸರಕ್ಕೆ ಮಾರಕವಾಗಿರುವ ಬಾಂಬೆ ಗಣೇಶ, ಪಿಒಪಿ ಗಣೇಶಮೂರ್ತಿಗಳ ಮಾರಾಟ ನಿಷೇಧ ಮಾಡಲಾಗಿದೆ. ಆದರೂ ನಗರಸಭೆ ಮುಂಭಾಗದಲ್ಲಿ ಬಾಂಬೆ ಗಣೇಶಮೂರ್ತಿಗಳ ಮಾರಾಟ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಗರಸಭೆ ಅಧಿಕಾರಿಗಳು ದಾಳಿ ಮಾಡಿ ಗಣೇಶಮೂರ್ತಿಗಳನ್ನು ಜಪ್ತಿ ಮಾಡಿದ್ದಾರೆ.

ನಗರಸಭೆ ಕಾರ್ಯಾಲಯದ ಮುಂಭಾಗದಲ್ಲಿ ನಿಷೇಧಿತ ಗಣೇಶಮೂರ್ತಿಗಳ ಮಾರಾಟ ಮಾಡಲಾಗುತ್ತಿತ್ತು. ಈ ವಿಚಾರ ಪರಿಸರ ಪ್ರೇಮಿಗಳು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಪೌರಾಯುಕ್ತ ಕಾರ್ತಿಕೇಶ್ವರ್ ದಾಳಿ ನಡೆಸಿ, ಬಾಂಬೆ ಗಣೇಶಮೂರ್ತಿಗಳನ್ನು ಜಪ್ತಿ ಮಾಡಿಸಿದರು.

1974ರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾಯ್ದೆಗಳ ಪ್ರಕಾರ ಜಲಮೂಲ ಮತ್ತು ನೆಲಮೂಲಕ್ಕೆ ಹಾನಿಯನ್ನುಂಟು ಮಾಡುವ ಪಿಒಪಿ, ಬಾಂಬೆ ಗಣೇಶ ಮತ್ತು ಅಪಾಯಕಾರಿ ಬಣ್ಣಗಳ ಗಣೇಶಮೂರ್ತಿಗಳ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸಲಾಗಿದೆ. ಕಾನೂನು ಉಲ್ಲಂಘನೆಯಾದಲ್ಲಿ 10 ಸಾವಿರ ರೂ.ದಂಡ ಹಾಗೂ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net