ಎಸಿ ಕಚೇರಿ ಪೀಠೋಪಕರಣ ಜಪ್ತಿ

30-01-Shiva-2
ರೈತರಿಂದ ಸ್ವಾೀನ ಪಡಿಸಿಕೊಂಡು ಭೂಮಿಗೆ ಪರಿಹಾರ ನೀಡದ ಕಾರಣ ನ್ಯಾಯಾಲಯದ ಆದೇಶದ ಮೇರೆಗೆ ರಾಯಚೂರಿನ ಸಹಾಯಕ ಆಯುಕ್ತರ ಕಚೇರಿಯ ಪೀಠೋಪಕರಣಗಳನ್ನು ಮಂಗಳವಾರ ಜಪ್ತಿ ಮಾಡಿಕೊಳ್ಳಲಾಯಿತು.
Published on

ರಾಯಚೂರು: ಏತ ನೀರಾವರಿ ಯೋಜನೆಗಾಗಿ ರೈತರಿಂದ ಸ್ವಾೀನ ಪಡಿಸಿಕೊಂಡ ಭೂಮಿಗೆ ಪರಿಹಾರ ನೀಡದಿರುವುದರಿಂದ ನ್ಯಾಯಾಲಯದ ಆದೇಶದ ಮೇರೆಗೆ ಸ್ಥಳೀಯ ಸಹಾಯಕ ಆಯುಕ್ತರ ಕಚೇರಿಯ ಪೀಠೋಪಕರಣಗಳನ್ನು ಅಕಾರಿಗಳು ಮಂಗಳವಾರ ಜಪ್ತಿ ಮಾಡಿಕೊಂಡರು.
ಸಣ್ಣ ನೀರಾವರಿ ಇಲಾಖೆಯಿಂದ ಏತ ನೀರಾವರಿ ಯೋಜನೆಗಾಗಿ ಜಿಲ್ಲೆಯ ಜೆ.ಮಲ್ಲಾಪುರ, ದದ್ದಲ್, ಸುಂಕೇಶ್ವರ ಗ್ರಾಮದಲ್ಲಿ 2008, 2009 ಮತ್ತು 2012ರಲ್ಲಿ ರೈತರ ಜಮೀನುಗಳನ್ನು ಎಕರೆಗೆ 2.98 ಲಕ್ಷ ರೂ.ನಂತೆ ಸಹಾಯಕ ಆಯುಕ್ತರು ಸ್ವಾೀನ ಪಡಿಸಿಕೊಂಡಿದ್ದರು.
ಆದರೆ ಇದುವರೆಗೂ ಸ್ವಾೀನ ಪಡಿಸಿಕೊಂಡ ಭೂಮಿಗೆ ಪರಿಹಾರ ಪಾವತಿ ಮಾಡಿರಲಿಲ್ಲ. ಈ ಕುರಿತು ರೈತರು ಪರಿಹಾರಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಹಲವಾರು ಬಾರಿ ನ್ಯಾಯಾಲಯದಿಂದ ನೋಟಿಸ್ ಜಾರಿಗೊಳಿಸಿದ್ದರೂ ಸಹಾಯಕ ಆಯುಕ್ತರು ಸ್ಪಂದನೆ ನೀಡಿರಲಿಲ್ಲ.
ಈ ಹಿನ್ನೆಲೆಯಲ್ಲಿ ಜಿಲ್ಲಾ ಪ್ರಧಾನ ಎರಡನೇ ಸತ್ರ ನ್ಯಾಯಾಲಯ ಸಹಾಯಕ ಆಯುಕ್ತರ ಕಚೇರಿಯ ಪೀಠೋಪಕರಣ ಜಪ್ತಿಗೆ ಆದೇಶ ನೀಡಿದ ಹಿನ್ನೆಲೆಯಲ್ಲಿ ಅಕಾರಿಗಳು ಕಚೇರಿಯಲ್ಲಿದ್ದ ಪೀಠೋಪಕರಣಗಳನ್ನು ಜಪ್ತಿ ಮಾಡಿಕೊಂಡು ಮುಂದಿನ ಕ್ರಮಕೈಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net