ಆತ್ಮವಿಶ್ವಾಸದಿಂದ ಸಾಧನೆ ಸಾಧ್ಯ

15 MANVI 02
ಮಾನ್ವಿ ರಾಮಲಿಂಗ ಚೌಡೇಶ್ವರಿ ದೇವಸ್ಥಾನದಲ್ಲಿ ದೇವಾಂಗ ಸಮಾಜದಿಂದ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಭರತ್ ಹೆಂಬಾ ಅವರನ್ನು ಸನ್ಮಾನಿಸಲಾಯಿತು. ಒಕ್ಕೂಟದ ಅಧ್ಯಕ್ಷ ಜಿ. ಪ್ರೇಮಶಂಕರಕುಮಾರ, ಹಿರಿಯ ನ್ಯಾಯವಾದಿ ಗುಮ್ಮಾ ಬಸವರಾಜ, ಶಿಕ್ಷಕ ನಾಗರಾಜ ಕೊಳ್ಳಿ ಇತರರಿದ್ದರು.
Published on

ಮಾನ್ವಿ: ಸಾಧನೆಗೆ ಬಡತನ ಅಡ್ಡಿಯಾಗದು ಎಂದು ಸಾಹಿತಿ ರಮೇಶಬಾಬು ಯಾಳಗಿ ಹೇಳಿದರು.

ಪಟ್ಟಣದ ರಾಮಲಿಂಗ ಚೌಡೇಶ್ವರಿ ದೇವಸ್ಥಾನದಲ್ಲಿ ಸೋಮವಾರ ತಾಲೂಕು ದೇವಾಂಗ ಸಮಾಜದ ವತಿಯಿಂದ 2023-24 ನೆಯ ಸಾಲಿನಲ್ಲಿ ಆಯೋಜಿಸಿದ್ದ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲಿ ಉತ್ತೀರ್ಣರಾಗಿರುವುದಕ್ಕೆ ಸನ್ಮಾನಿಸಿ ಮಾತನಾಡಿದರು.

ಉನ್ನತ ಸಾಧನೆಗೆ ಬಡತನ ಎಂದಿಗೂ ಅಡಿಯಾಗುವುದಿಲ್ಲ ಎನ್ನುವುದನ್ನು ಭರತ್ ಹೆಂಬಾ ತೋರಿಸಿಕೊಡುವ ಮೂಲಕ ಪ್ರತಿಕೂಲ ಸನ್ನಿವೇಶದಲ್ಲೂ ಬಿಡದ ಛಲ, ಸತತ ಪ್ರಯತ್ನ, ನಿರಂತರ ಅಧ್ಯಯನ, ಆತ್ಮವಿಶ್ವಾಸದಿಂದ ಸಾಧಿಸಿದ್ದು, ಯುವಕರಿಗೆ ಸ್ಪೂರ್ತಿಯಾಗಿದ್ದಾರೆ ಎಂದರು.

ಹಿರಿಯ ನ್ಯಾಯವಾದಿ ಗುಮ್ಮಾ ಬಸವರಾಜ ಮಾತನಾಡಿ, ಚಿಕ್ಕ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡ ಭರತ್ ಹೆಂಬಾ ಅವರ ಈ ಅದ್ಭುತ ಸಾಧನೆಯ ಹಿಂದೆ ಅವರ ತಾಯಿ ವಿಜಯಲಕ್ಷ್ಮೀ ಪಟ್ಟ ಪರಿಶ್ರಮ ನಿಜಕ್ಕೂ ದೊಡ್ಡದು ಎಂದರು.

ಸಮುದಾಯದ ಎಚ್. ಕುಮಾರೆಪ್ಪ ಸಾಹುಕಾರ, ದೇವಸ್ಥಾನದ ಧರ್ಮದರ್ಶಿ ಜಿ. ಪ್ರಮೋದಕುಮಾರ, ಎಚ್. ಸತೀಶಕುಮಾರ, ಶಂಕರ್ ವಟಾರ, ಚಂದ್ರು ಗುಮ್ಮಾ, ವಿರೂಪಾಕ್ಷಪ್ಪ ಕೊಪ್ಪರದ, ಸಿದ್ದರಾಮಪ್ಪ ಬುದ್ದಿ, ಸೊಲ್ಲಾಪುರ ಶಿವಪ್ಪ, ರಾಜಶೇಖರ, ಬಸವರಾಜ ಗೋಗಿ, ಸರೋಜಾ ಗುಮ್ಮಾ, ಶಿಕ್ಷಕಿ ಗುಮ್ಮಾ ಲಕ್ಷ್ಮಿ, ವಿಜಯಲಕ್ಷ್ಮಿ ಹೆಂಬಾ, ನೀಲಾವತಿ ಕೊಳ್ಳಿ, ಸರೋಜಾ ಗುಮ್ಮಾ, ಶಿಕ್ಷಕ ನಾಗರಾಜ ಕೊಳ್ಳಿ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net