

ಕಲಘಟಗಿ: ಕಲಘಟಗಿ-ಅಳ್ನಾವರ ತಾಲೂಕುಗಳು ಸೆ. 30ರ ಒಳಗಾಗಿ ಬರಪೀಡಿತ ಪಟ್ಟಿಗೆ ಸೇರುವ ಭರವಸೆ ಇದೆ ಎಂದು ಉಸ್ತುವಾರಿ ಸಚಿವರು ತಿಳಿಸಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರ ರೈತರ ಪರವಾಗಿದೆ. ಅಭಿವೃದ್ಧಿಯ ವಿಷಯದಲ್ಲಿ ಸಂತೋಷ ಲಾಡ್ ಅವರು ಕ್ಷೇತ್ರವನ್ನು ಕಡೆಗಣಿಸಿಲ್ಲ ಎಂದರು.
ಕೆಪಿಸಿಸಿ ಸದಸ್ಯ ಎಸ್.ಆರ್.ಪಾಟೀಲ ಮಾತನಾಡಿದರು. ವೃಷಭೇಂದ್ರ ಪಟ್ಟಣಶೆಟ್ಟಿ, ಶಿವಾಜಿ ವಾಗ್ಮೋಡೆ, ಬಾಬಣ್ಣ ಅಂಚಟಗೇರಿ, ಚನ್ನಪ್ಪ ತೋಪಲಕಟ್ಟಿ, ಮಲ್ಲಪ್ಪ ಪೂಜಾರ, ಸೋಮಶೇಖರ ಬೆನ್ನೂರ, ಬಾಳು ಖಾನಾಪುರ, ಹರಿಶಂಕರ ಮಠದ, ನರೇಶ ಮಲೆನಾಡು, ಸುಧೀರ ಬೋಳಾರ, ಯಲ್ಲಪ್ಪ ಚವರಗಿ, ಬಸವರಾಜ ರಾಯನಾಳ, ಪ್ರಭು ರಾಮನಾಳ, ಶಾಂತಲಿಂಗ ಬೇರೂಡಗಿ, ಗಂಗಾಧರ ಚಿಕ್ಕಮಠ, ನಿಜಗುಣಿ ಕ್ಷೀರಸಾಗರ, ಹನುಮಂತ ಚವರಗುಡ್ಡ, ಬೋಜಪ್ಪ ಲಮಾಣಿ, ಗುರು ಬೆಂಗೇರಿ, ಗುರುಪಾದ ಉಳ್ಳಾಗಡ್ಡಿ, ಸಂತೋಷ ಕದಂ, ವೆಂಕಟೇಶ ಬಂಡಿವಡ್ಡರ, ಬಸವರಾಜ ದಾಸನಕೊಪ್ಪ, ಗುರುಪಾದಯ್ಯ ಹಿರೇಮಠ, ಹನುಮಂತಪ್ಪ ಕಾಳೆ ಇದ್ದರು.