ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಿ

10BK10
ಬಸವಕಲ್ಯಾಣದ ಹರಳಯ್ಯ ಗವಿಯಲ್ಲಿ ಶರಣ ವಿಜಯೋತ್ಸವ ನಾಡಹಬ್ಬ ಹಾಗೂ ಹುತಾತ್ಮ ದಿನ ನಿಮಿತ್ತ ಗುರುವಾರ ಸಂಜೆ ಏರ್ಪಡಿಸಿದ್ದ ಗೋಷ್ಠಿಯನ್ನು ಪಿಎಸ್‌ಐ ನಾಗೇಂದ್ರ ಉದ್ಘಾಟಿಸಿದರು. ಶ್ರೀ ಡಾ.ಮಹಾಂತ ಬಸವಲಿಂಗ ಸ್ವಾಮೀಜಿ, ಪೂಜ್ಯ ಡಾ.ಗಂಗಾಂಬಿಕಾ ಅಕ್ಕ, ಸುನೀಲಕುಮಾರ ಎನ್., ಬಿಡಿಪಿಸಿ ನಿರ್ದೇಶಕರಾದ ಸುಭಾಷ ಹೊಳಕುಂದೆ, ವೀರಣ್ಣ ಹಲಶೆಟ್ಟಿ, ರೇವಣಪ್ಪ ರಾಯವಾಡೆ, ಜಗನ್ನಾಥ ಖೂಬಾ ಇತರರಿದ್ದರು.
Published on

ಬಸವಕಲ್ಯಾಣ: ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಆದಾಯ ಪಡೆಯಬಹುದಾಗಿದೆ ಎಂದು ಬೀದರ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಸುನೀಲಕುಮಾರ ಎನ್. ಹೇಳಿದರು.

ಅಂತಾರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಹಯೋಗದಡಿ ಶರಣ ವಿಜಯೋತ್ಸವ ನಾಡಹಬ್ಬ ಹಾಗೂ ಹುತಾತ್ಮ ದಿನ ನಿಮಿತ್ತ ನಗರದ ಹರಳಯ್ಯ ಗವಿಯಲ್ಲಿ ಗುರುವಾರ ಸಂಜೆ ಏರ್ಪಡಿಸಿದ್ದ ಅನುಭವ ಮಂಟಪ ಕೊಡುಗೆ ಕುರಿತ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಯಕವೇ ಕೈಲಾಸ ಎಂದು ಹೇಳಿದ ಶರಣರು ಕೃಷಿಗೆ ಮಹತ್ವ ನೀಡಿದ್ದರು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಗ್ರಾಮೀಣ ಠಾಣೆ ಪಿಎಸ್‌ಐ ನಾಗೇಂದ್ರ ಎಂ.ಕೆ. ಮಾತನಾಡಿ, ೧೨ನೇ ಶತಮಾನದಲ್ಲಿ ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಉದ್ದೇಶವೇ ಮಾನವ ಕಲ್ಯಾಣವಾಗಿತ್ತು. ಹೀಗಾಗಿ ಜಗತ್ತಿನ ಎಲ್ಲ ದಾರಿಗಳು ಕಲ್ಯಾಣ ಕಡೆ ತಿರುಗಿದವು. ಯುವಕರು ವಚನಗಳನ್ನು ಅರಿತು ಬದುಕಿನಲ್ಲಿ ಅಳವಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಸಲಹೆ ನೀಡಿದರು.

ಸಾನ್ನಿಧ್ಯ ವಹಿಸಿದ್ದ ಬಾದಾಮಿಯ ಶ್ರೀ ಡಾ.ಮಹಾಂತ ಬಸವಲಿಂಗ ಸ್ವಾಮೀಜಿ ಮಾತನಾಡಿ, ಶರಣರು ಅನುಭವ ಮಂಟಪ ಮೂಲಕ ಅಭಿವ್ಯಕ್ತಿ ಸ್ವಾತಂತ್ರ್ಯ, ಕಾಯಕ-ದಾಸೋಹ, ಅನುಭವವನ್ನೇ ಮೂಲ ಮಂತ್ರವಾಗಿ ಇಟ್ಟುಕೊಂಡು ಸಮಾನತೆ ಸೂತ್ರದ ಮೇಲೆ ಅಸ್ತಿತ್ವಕ್ಕೆ ಬಂದ ಅನುಭವ ಮಂಟಪ ಜಗತ್ತಿನ ಮೊದಲ ಸಂಸತ್ ಆಗಿದೆ ಎಂದರು.

ನೇತೃತ್ವ ವಹಿಸಿದ್ದ ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಆಶೀರ್ವಚನ ನೀಡಿದರು. ಬಿಡಿಪಿಸಿ ನಿರ್ದೇಶಕರಾದ ಸುಭಾಷ ಹೊಳಕುಂದೆ, ವೀರಣ್ಣ ಹಲಶೆಟ್ಟಿ, ರೇವಣಪ್ಪ ರಾಯವಾಡೆ, ಜಗನ್ನಾಥ ಖೂಬಾ, ಸಂಜುಕುಮಾರ ದೇಗಲೂರೆ, ರೇವಣಸಿದ್ದ ಯರಬಾಗ, ಯುವರಾಜ ಬೆಂಡೆ, ಸಂಗಮೇಶ ತೊಗರಖೇಡೆ, ವಿದ್ಯಾವತಿ ಶೇರಿಕಾರ ಇತರರಿದ್ದರು. ಸರ್ವೋದಯ ಪಬ್ಲಿಕ್ ಶಾಲೆ ಬೇಲೂರ ಮಕ್ಕಳು ಜಾನಪದ ನೃತ್ಯ ಮಾಡಿದರು. ರೇಖಾ ಗುದಗೆ ನಿರೂಪಣೆ ಮಾಡಿದರು. ಜ್ಯೋತಿ ಲಿಂಗರಾಜ ಶಾಶೆಟ್ಟೆ ಭಕ್ತಿ ದಾಸೋಹಗೈದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net