ಚಿತ್ರದುರ್ಗದಲ್ಲಿ 28ರಂದು ಸಮಾವೇಶ

Conference on 28th at Chitradurga
ದೇವರಹಿಪ್ಪರಗಿ ಪ್ರವಾಸಿಮಂದಿರದಲ್ಲಿ ಜರುಗಿದ ಶೋಷಿತರ ಜಾಗೃತಿ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ವಿವಿಧ ಸಮುದಾಯಗಳ ಪ್ರಮುಖರು ಭಾಗವಹಿಸಿದ್ದರು.
Published on

ದೇವರಹಿಪ್ಪರಗಿ: ಶೋಷಿತರ ಜಾಗೃತಿ ಸಮಾವೇಶದ ಅಂಗವಾಗಿ ವಿವಿಧ ಸಮುದಾಯಗಳ ಪ್ರಮುಖರ ಪೂರ್ವಭಾವಿ ಸಭೆ ಪಟ್ಟಣದ ಪ್ರವಾಸಿಮಂದಿರದಲ್ಲಿ ಮಂಗಳವಾರ ಜರುಗಿತು.

ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಎಸ್.ಎಂ. ಪಾಟೀಲ(ಗಣಿಯಾರ), ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟಗಳ ಅಡಿಯಲ್ಲಿ ಚಿತ್ರದುರ್ಗದಲ್ಲಿ ಜ. 28ರಂದು ಏರ್ಪಡಿಸಲಾಗಿರುವ ಸಮಾವೇಶದ ಕುರಿತು ಮಾಹಿತಿ ನೀಡಿ, ತಾಲೂಕಿನ ಶೋಷಿತ ಸಮುದಾಯಗಳ ಪ್ರಮುಖರು ಅದರಲ್ಲಿಯೂ ದಲಿತ, ಹಿಂದುಳಿದ, ಅಲೆಮಾರಿ, ಅರೆಅಲೆಮಾರಿ, ಆದಿವಾಸಿ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.

ಸೋಮನಾಥ ಕಳ್ಳಿಮನಿ, ಗೌರಮ್ಮ ಮುತ್ತತ್ತಿ, ರಾಜಶ್ರೀ ಯರನಾಳ, ನಾಗರಾಜು ಲಂಬು, ಪ್ರಕಾಶ ಗುಡಿಮನಿ ಮಾತನಾಡಿದರು.

ಸಭೆಯಲ್ಲಿ ಮಾನವ ಬಂಧುತ್ವ ವೇದಿಕೆಯ ಪ್ರಭುಗೌಡ ಪಾಟೀಲ, ಜಕ್ಕಪ್ಪ ಅಡವಿ, ರಾಜೇಶ ತೊರವಿ, ದೇವಾನಂದ ಲಚ್ಯಾಣ, ರಾಜಕುಮಾರ ಸಿಂದಗೇರಿ, ಮಹೇಶ ಮುರಾಳ, ಬಸವರಾಜ ಇಂಗಳಗಿ, ಶಿವು ವಾಲೀಕಾರ, ಹೂಯೋಗಿ ತಳ್ಳೊಳ್ಳಿ, ಭೀರು ಹಳ್ಳಿ, ರಾಜು ರಾಠೋಡ, ಶರಣು ನಾಟೀಕಾರ, ಅಪ್ಪು ಮುಲ್ಲಾ, ರಾಘವೇಂದ್ರ ಪಡಗಾನೂರ, ರಾಘವೇಂದ್ರ ಗುಡಿಮನಿ, ಇಕ್ಬಾಲ್ ಬಿಜಾಪುರ, ರಾವುತ ಮಾಸ್ತರ ತಳಕೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net