11ರಂದು ಮಹಿಳಾ ಸ್ವ-ಸಹಾಯ ಸಂಘಗಳ ಸಮಾವೇಶ

9 smg Somashekara Shivacharya swamy
ಶ್ರೀ ಸೋಮಶೇಖರ ಶಿವಾಚಾರ್ಯ ಮಹಾ ಸ್ವಾಮೀಜಿ
Published on

ಶಿವಮೊಗ್ಗ : ಮಹಿಳೆಯರಿಗೆ ಸ್ವಾಭಿಮಾನ, ಸ್ವಾವಲಂಬನೆ ಮೂಡಿಸಲು ಮನಸ್ಸುಗಳನ್ನು ಕಟ್ಟುವ ಹಿನ್ನಲೆಯಲ್ಲಿ ಶಿಕಾರಿಪುರದಲ್ಲಿ -ೆ.11ರಂದು ಹೊಸ ಸಂತೆ ಮೈದಾನದಲ್ಲಿ ಶ್ರೀ ಕ್ಷೇತ್ರ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯಿAದ ರಾಜ್ಯಮಟ್ಟದ ಪುಷ್ಪಗಿರಿ ಮಹಿಳಾ ಸ್ವಸಹಾಯ ಸಂಘಗಳ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಕ್ಷೇತ್ರದ ಜಗದ್ಗುರು ಶ್ರೀ ಸೋಮಶೇಖರ ಶಿವಾಚಾರ್ಯ ಮಹಾ ಸ್ವಾಮೀಜಿ ಹೇಳಿದರು.
ಮಧ್ಯಾಹ್ನ 3ಗಂಟೆಗೆ ಶಿಕಾರಿಪುರದ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ನಡೆಯಲಿದ್ದು, 5 ಗಂಟೆಗೆ ಹೊಸ ಸಂತೆ ಮೈದಾನದಲ್ಲಿ ನಡೆಯುವ ಸಭಾ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಉದ್ಘಾಟಿಸುವರು. ಸಭೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಬಿ.ವೈ.ವಿಜಯೇಂದ್ರ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸೇರಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿದ್ಯಾರ್ಥಿಗಳಿಗಾಗಿ ಯುವ ರೈತ ಸಂಘಗಳನ್ನು ಹುಟ್ಟು ಹಾಕಲಾಗುವುದು. ಯುವಕರಿಗಾಗಿ ಶೈಕ್ಷಣಿಕ ಕಾರ್ಯಾಗಾರ, ಕೃಷಿ ಉತ್ತೇಜನ ನೀಡುವುದು ಸಂಘದ ಉದ್ದೇಶವಾಗಿದೆ. ಕಳೆದ ೩ ವರ್ಷಗಳ ಹಿಂದೆ ಪುಷ್ಪಗಿರಿ ಕ್ಷೇತ್ರವು ಮಹಿಳೆಯರಿಗಾಗಿ ಸ್ವ-ಸಹಾಯ ಸಂಘಗಳನ್ನು ಹುಟ್ಟುಹಾಕಿತ್ತು. ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡಲು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದೆ. ಇದರೊಂದಿಗೆ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದೆ ಎಂದರು.
ಪ್ರಮುಖರಾದ ನಾಗಯ್ಯ, ಡಾ. ಧನಂಜಯ ಸರ್ಜಿ, ಪಿ.ರುದ್ರೇಶ್, ಜೈರಾಜ್, ಡಾ.ಶೇಖರ್, ಬಿ.ಡಿ.ಭೂಕಾಂತ್, ಗಜೇಂದ್ರಪ್ಪ, ಸಿದ್ದನಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net