ಸ್ತ್ರೀಯರ ಆರ್ಥಿಕ ಸಬಲೀಕರಣಕ್ಕಾಗಿ ಶಿಕಾರಿಪುರದಲ್ಲಿ 11ರಂದು ರಾಜ್ಯಮಟ್ಟದ ಮಹಿಳಾ ಸ್ವಸಹಾಯ ಸಂಘಗಳ ಸಮಾವೇಶ

2 ಎಸ್ಕೆಪಿ 1t
ಮಹಿಳಾ ಸಮಾವೇಶದ ಪ್ರಚಾರ ರಥಕ್ಕೆ ಶಿಕಾರಿಪುರದಲ್ಲಿ ಚಾಲನೆ ನೀಡಲಾಯಿತು. ಲೋಹಿತ್, ನಾಗರಾಜ್, ಪರಮೇಶ್ವರಪ್ಪ ಇತರರಿದ್ದರು.
Published on

ಶಿಕಾರಿಪುರ: ರಾಜ್ಯ ಮಹಿಳಾ ಸ್ವಸಹಾಯ ಸಂಘಗಳ ಸಮಾವೇಶವನ್ನು ಫೆ.11ರಂದು ಪಟ್ಟಣದಲ್ಲಿ ಹಮ್ಮಿಕೊಂಡಿದ್ದು ಶ್ರೀಕ್ಷೇತ್ರ ಪುಷ್ಪಗಿರಿಯ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿ ನಾಗರಾಜ್ ತಿಳಿಸಿದರು.

ಸಮಾವೇಶಕ್ಕೆ ಪೂರಕವಾಗಿ ಆಯೋಜಿಸಿರುವ ಪ್ರಚಾರ ರಥಕ್ಕೆ ಶ್ರೀ ಹುಚ್ಚುರಾಯಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಶುಕ್ರವಾರ ಚಾಲನೆ ನೀಡಿದ ವೇಳೆ ಮಾತನಾಡಿ, ಮಹಿಳಾ ಆರ್ಥಿಕ ಸಬಲೀಕರಣ ಸಮಾವೇಶದ ಮೂಲ ಉದ್ದೇಶವಾಗಿದೆ. ಅಂದು ಮಧ್ಯಾಹ್ನ ಬೃಹತ್ ಮೆರವಣಿಗೆ ಅಕ್ಕಮಹಾದೇವಿ ವೃತ್ತದಿಂದ ಹೊರಟು ಬಸ್‌ನಿಲ್ದಾಣದ ಮೂಲಕ ಹೊಸ ಸಂತೆ ಮೈದಾನ ತಲುಪಲಿದೆ. ಡೊಳ್ಳು ಕುಣಿತ, ಮಂಗಳವಾದ್ಯ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳು ಮೆರವಣಿಗೆ ಕಳೆ ನೀಡಲಿವೆ. ಮೆರವಣಿಗೆ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. 9 ಜಿಲ್ಲೆಗಳಿಂದ 15,000ಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ ಎಂದು ಹೇಳಿದರು.
ತಾಲೂಕು ನೊಳಂಬ ವೀರಶೈವ ಸಮಾಜದ ಅಧ್ಯಕ್ಷ ಲೋಹಿತ್, ಕಾರ್ಯದರ್ಶಿ ಪರಮೇಶ್ವರಪ್ಪ, ಪ್ರಮುಖರಾದ ರಮೇಶ್ ಇಟ್ಟಿಗೆಹಳ್ಳಿ, ಗುರುರಾಜ್ ಜಕ್ಕಿನಕೊಪ್ಪ, ಶಶಿಧರ್ ಚುರ್ಚಿಗುಂಡಿ, ರಾಜೇಶ್, ರವಿಕುಮಾರ್ ಹೇಮರಾಜ್, ಮಂಜಮ್ಮ, ಪ್ರತಿಮಾ, ನೇತ್ರಮ್ಮ, ಸುಧಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net