

ಮೈಸೂರು: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಿಂದ ವಿಶ್ವಕರ್ಮ ಸಮುದಾಯಕ್ಕೆ ಅಪಾರ ಅನುಕೂಲಗಳಾಗಿದ್ದು, ಪಕ್ಷಕ್ಕೆ ಬೆಂಬಲ ನೀಡಲು ಏ.21ರಂದು ನಗರದಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದು ವಿಶ್ವಕರ್ಮ ಸಮಾಜದ ಮುಖಂಡ ಬಾಬು ಪತ್ತಾರ್ ತಿಳಿಸಿದರು.
ಕೇಂದ್ರದ ಯೋಜನೆಗಳಿಂದ ರಾಜ್ಯದ ಕುಶಲಕರ್ಮಿಗಳಿಗೆ 100 ಕೋಟಿಗೂ ಹೆಚ್ಚು ಸಹಾಯಧನ ಬರಲಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಅವರಿಗೂ ಸಮುದಾಯದ ಬಗ್ಗೆ ಅಪಾರ ಗೌರವವಿದ್ದು, ಈ ಬಾರಿ ಸಮುದಾಯದವರು ಬಿಜೆಪಿ ಬೆಂಬಲಿಸಲಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಾಜದ ಮುಖಂಡರಾದ ಕೆ.ಎಸ್.ರೇವಣ್ಣ, ಎಂ.ಜಿ.ರವಿಶಂಕರ್, ರಂಗಪ್ಪ, ಬಾಬಣ್ಣ, ಚಂದ್ರು ಹಾಗೂ ಕಾವೇರಿ ಇದ್ದರು.