ಕ್ಯಾನ್ಸರ್ ಆಸ್ಪತ್ರೆಯಲ್ಲಿ ಶಿಕ್ಷಣ ಸಮ್ಮೇಳನ

IMG-20240215-WA0003.jpg
Published on

ಹುಬ್ಬಳ್ಳಿ: ಧಾರವಾಡದ ಜೆಎಸ್ಎಸ್ ಸ್ಪೀಚ್ ಹಾಗೂ ಹೀಯರಿಂಗ್ ಸಂಸ್ಥೆಯ ಸಹಯೋಗದಲ್ಲಿ ನವನಗರದ ಕರ್ನಾಟಕ ಕ್ಯಾನ್ಸರ್ ಥೆರಪಿ ಹಾಗೂ ಸಂಶೋಧನೆ ಸಂಸ್ಥೆಯಲ್ಲಿ ಎರಡು ದಿನಗಳ ಮುಂದುವರಿದ ಪುನರ್ವಸತಿ ಶಿಕ್ಷಣ ಸಮ್ಮೇಳನ ಏರ್ಪಡಿಸಲಾಗಿತ್ತು.

ಭಾರತೀಯ ಪುನರ್ವಸತಿ ಮಂಡಳಿ ಆಶ್ರಯದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತು ಬಾರದ ಕಾಯಿಲೆ ಉಳ್ಳವರಿಗೆ ಪರಿಹಾರ ನೀಡುವ ದಿಸೆಯಲ್ಲಿ ಚರ್ಚೆಗಳು ನಡೆದವು. ಸರಿಯಾಗಿ ಕಿವಿ ಕೇಳಿಸದ ಹಾಗೂ ಮಾತನಾಡುವಾಗ ಗುಕ್ಕುವುದು ಇತ್ಯಾದಿ ಸಮಸ್ಯೆಗಳಿಗೆ ಚಿಕಿತ್ಸೆಗಳ ಬಗ್ಗೆ ಚರ್ಚಿಸಲಾಯಿತು.

ಸ್ಪೀಚ್ ಹಾಗೂ ಹೀಯರಿಂಗ್ ಅಧ್ಯಯನ ಮಾಡುತ್ತಿರುವ ವಿದ್ಯಾಥಿರ್ಗಳು, ವೃತ್ತಿಪರರು, ವೈದ್ಯಕಿಯ ಕ್ಷೇತ್ರದ ಗಣ್ಯರು ಸೇರಿ 200ಕ್ಕೂ ಹೆಚ್ಚು ಜನರು ದೇಶದ ವಿವಿಧ ಕಡೆಗಳಿಂದ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

25ಕ್ಕೂ ಹೆಚ್ಚು ವೈಜ್ಞಾನಿಕ ಸಂಶೋಧನೆಯ ಪ್ರಬಂಧಗಳನ್ನು ಮಂಡಿಸಲಾಯಿತು.

ಡಿಮ್ಹಾನ್ಸ್ ನಿರ್ದೇಶಕ ಡಾ. ಅರುಣಕುಮಾರ, ಕ್ಯಾನ್ಸರ್ ಆಸ್ಪತ್ರೆಯ ಸಿಇಒ ಡಾ. ವಿಲಾಸ ಜಿ,. ಜೆಎಸ್ಎಸ್ ಇನ್ಸ್ಟಿಟ್ಯೂಟ್ನ ಪ್ರಾಚಾರ್ಯ ಡಾ. ಜಿಜೋ ಪಿ.ಎಂ., ಕೆಸಿಟಿಆರ್ ಐ ಚೇರ್ಮನ್ ಡಾ. ಬಿ.ಆರ್. ಪಾಟೀಲ ಅವರು ಕಾರ್ಯಕ್ರಮ ಉದ್ಘಾಟಿಸಿದರು.

ಸಹಾಯಕ ಪ್ರಾಧ್ಯಾಪಕ ದರ್ಶನ ಡಿ, ಗಿರೀಶ ಕೆ.ಎಸ್., ತೇಜಾ ಕೆ. ಡಾ. ಸಾಯಿಕುಮಾರ ಆರ್.ಟಿ, ಇತರರು ಉಪನ್ಯಾಸ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net