ಹಿರಿಯರ ಆರೈಕೆಯಿಂದ ಜೀವನ ಸಾರ್ಥಕ

kh muniyappa
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಪ್ರತಿಯೊಬ್ಬರು ತಮ್ಮ ಹಿರಿಯರ ಆರೈಕೆಯಲ್ಲಿ ತೊಡಗಿಸಿಕೊಂಡು ತಮ್ಮ ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ದೊಡ್ಡಬಳ್ಳಾಪುರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸ್ಮೃತಿ ಗ್ರಾಮ-ಡಿಮೆನ್ಮಯಾ ವಿಲೇಜ್‌ನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ಕಾಲದಲ್ಲಿ ತಂದೆ ತಾಯಿಯವರನ್ನು ಕಡೆಗಣಿಸಿ ಅವರನ್ನು ವೃದ್ದಾಶ್ರಮಕ್ಕೆ ಸೇರಿಸುತ್ತಾರೆ ಈ ಪ್ರವೃತ್ತಿಯನ್ನು ಕಡಿಮೆ ಮಾಡಿಸಬೇಕು ನಾವು ನಮ್ಮ ಹಿರಿಯರ ಆರೈಕೆಯಲ್ಲಿ ತೊಡಗಿಸಿದಾಗ ನಮ್ಮ ಜೀವನ ಉತ್ತಮವಾಗಿರುತ್ತದೆ ಎಂದರು. ನೈಟಿಂಗೇಲ್ಸ್ ನ ವತಿಯಿಂದ ಹಿರಿಯರ ಆರೈಕೆಗಾಗಿ ಸ್ಮೃತಿ ಗ್ರಾಮವನ್ನು ಆಯೋಜಿಸಿ ಅವರ ಆರೈಕೆ ಮಾಡುವ ಕಾರ್ಯ ಸ್ವಾಗತಾರ್ಹವಾಗಿದೆ ಎಂದರು.

ಈ ದಿನಗಳಲ್ಲಿ ಆಸ್ಪತ್ರೆ ,ಕಾಲೇಜು,ಕಟ್ಟುವುದು ಸಾಮಾನ್ಯವಾಗಿದೆ ಆದರೆ ಇಲ್ಲಿ ಹಿರಿಯರ ಆರೈಕೆಯಲ್ಲಿ ನೈಟಿಂಗೇಲ್ಸ್ ಬಹಳ ಉತ್ತಮ ಕೆಲಸ ಮಾಡುತ್ತಿದ್ದಾರೆ ಇವರಿಗೆ ನಮ್ಮ ಸರ್ಕಾರದ ವತಿಯಿಂದ ಯಾವುದೇ ಸಹಕಾರ ಸಹಾಯ ಬೇಕಿದ್ದಲ್ಲಿ ಸಹಕರಿಸುತ್ತೇವೆ ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net