ಓದಿನಲ್ಲಿ ಶ್ರದ್ಧೆ, ನಿಷ್ಠೆ ಅವಶ್ಯ

15 MDG 1
Published on

ಮುಂಡರಗಿ: ದೈಹಿಕ ನ್ಯೂನತೆ ಹೊಂದಿದ ಸಾಕಷ್ಟು ಜನರು ಸಾಧನೆ ಮಾಡಿದ್ದಾರೆ. ಎಲ್ಲ ಅಂಗ ಚೆನ್ನಾಗಿರುವವರು ಓದಿನಲ್ಲಿ ಶ್ರದ್ಧೆ, ನಿಷ್ಠೆ ಹೊಂದಿ ಏನಾದರೂ ಸಾಧಿಸಬೇಕು ಎಂದು ಮಕ್ಕಳ ಸಾಹಿತಿ ಡಾ. ನಿಂಗು ಸೊಲಗಿ ಹೇಳಿದರು.

ಪಟ್ಟಣದ ಜಗದ್ಗುರು ಅನ್ನದಾನೀಶ್ವರ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾ ಸಮಿತಿ ಕಾರ್ಯಾಧ್ಯಕ್ಷ ಕರಬಸಪ್ಪ ಹಂಚಿನಾಳ ಮಾತನಾಡಿ, 10ನೇ ತರಗತಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.90ರಷ್ಟು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ 5 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂ ದರು. ಎಂ.ವೈ. ಬಳ್ಳಾರಿ, ಡಿ.ಎಸ್. ಹೊಸಮನಿ, ಶ್ರೀಧರ ಗುಡ್ಡಾನೂರ, ಎಸ್.ಬಿ. ಸವಣೂರ, ಎಸ್.ಐ. ಮುಲ್ಲಾ, ಜಾತಿಗೇರ, ಮಂಜು ಕೊಪ್ಪಿ, ಪ್ರಕಾಶ ಭಜಂತ್ರಿ ಇತರರಿದ್ದರು. ಎಸ್.ಸಿ. ಚಕ್ಕಡಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪೂಶ್ರೀ ನಿರೂಪಿಸಿದರು. ಪಿ.ಟಿ. ಉಳ್ಳಾಗಡ್ಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net