

ಹುಬ್ಬಳ್ಳಿ: ಮುಕುಂದನಗರದಲ್ಲಿ ಪತಂಜಲಿ ವೆಲ್ನೆಸ್ ಸೆಂಟರ್ ಹಾಗೂ ಜೈನ್ ಇಂಟರನ್ಯಾಷನಲ್ ಟ್ರೇಡ್ ಆರ್ಗನೈಜೇಶನ್ (ಜಿತೋ) ವತಿಯಿಂದ ಯೋಗ ಮತ್ತು ಅಗ್ನಿಹೋತ್ರ ಯಾಗ ಆಯೋಜಿಸಲಾಗಿತ್ತು.
ಯೋಗ ಗುರು ಭವರಲಾಲ ಆರ್ಯ ಯೋಗ ಮತ್ತು ಅಗ್ನಿಹೋತ್ರ ಯಾಗ ನಡೆಸಿಕೊಟ್ಟರು. ಪತಂಜಲಿ ವೆಲ್ನೆಸ್ ಸೆಂಟರ್ನಲ್ಲಿ ಕಲ್ಪಿಸಲಾಗಿರುವ ಮೌಲಸೌಕರ್ಯಗಳ ಬಗ್ಗೆ ಜಿತೋ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿತೋ ಚೇರ್ಮನ್ ಪ್ರಕಾಶ ಕೋಠಾರಿ, ಕಾರ್ಯದರ್ಶಿ ಭರತ ಪಟವಾರಿ, ಭವರಲಾಲ ಜೈನ್, ರಾಜನ ಜೈನ್, ಪ್ರವೀಣ ಚೌಧುರಿ, ಸೋಹಾನ ಜೈನ್, ಬಾಹುಬಲ ಜೈನ್, ಆಶೀಶ್ ನಹತಾ, ವೆಲ್ನೆಸ್ ಸೆಂಟರ್ನ ಅಧ್ಯಕ್ಷ ರಮೇಶ ಬಾಫಣಾ, ಉಪಾಧ್ಯಕ್ಷ ಗೌತಮ ಬಾಫಣಾ, ದಿನೇಶ ಜೈನ್, ಹಿತೇಶ ಬಾಫಣಾ, ಇತರರು ಇದ್ದರು.