

ವಿಜಯಪುರ: ಅಕಾಲಿಕ ಮಳೆ ಮತ್ತು ಡೋಣಿ ನದಿ ಪ್ರವಾಹದಿಂದ ನಷ್ಟಗೊಂಡ ಬೆಳೆಯನ್ನು ಕೃಷಿ ಇಲಾಖೆಯಿಂದ ಜಂಟಿ ಸಮೀೆ ನಡೆಸಿ ಸರ್ಕಾರ ಹಾಗೂ ವಿಮಾ ಕಂಪನಿಯಿಂದ ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿ ರಾಜ್ಯ ರೈತ ಸಂ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ಟಿ. ಭೂಬಾಲನ್ ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಕಳೆದ 2&3 ವರ್ಷ ಬರಗಾಲ ಪರಿಸ್ಥಿತಿಯಿಂದಾಗಿ ರೈತರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವರ್ಷವಾದರೂ ಅನುಕೂಲವಾದಿತು ಎಂಬ ಆಶಾಭಾವನೆಯೊಂದಿಗೆ ಸಾಲ ಮಾಡಿ ಬಿತ್ತನೆ ಮಾಡಿದ ರೈತರಿಗೆ ಮಳೆ ಸಾಕಷ್ಟು ನಷ್ಟ ಉಂಟು ಮಾಡಿದ್ದು, ಬಿತ್ತಿದ ಬೆಳೆ ಮಳೆಯ ರಭಸಕ್ಕೆ ನೆಲ ಕಚ್ಚಿವೆ. ಸರ್ಕಾರ ಕೂಡಲೆ ಜಂಟಿ ಸಮೀೆ ನಡೆಸಿ ನಷ್ಟ ಅನುಭವಿಸಿದ ಅರ್ಹ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಎಲ್ಲ 13 ತಾಲೂಕುಗಳಲ್ಲಿ ಸಮೀೆ ನಡೆಸಲು ನಿರ್ದೇಶಿಸಬೇಕು. ಕೆಲವೊಂದು ತಾಲೂಕುಗಳಲ್ಲಿ ಸಮೀೆ ಮಾಡಲು ಆದೇಶ ಬಂದಿಲ್ಲ ಎಂದು ರೈತರಿಗೆ ಮರಳಿ ಕಳುಹಿಸುತ್ತಿದ್ದಾರೆ. ವಿಮೆ ತುಂಬಿದ ಎಲ್ಲ ರೈತರಿಗೂ ಸರಿಯಾದ ನ್ಯಾಯ ಸಿಗುವಂತಾಗಬೇಕು. ಈ ಕುರಿತು ರೈತರಿಗೆ ಜಾಗೃತಿ ಮೂಡಿಸುವುದರ ಜತೆಗೆ ಅಗತ್ಯ ದಾಖಲಾತಿಗಳನ್ನು ಇಲಾಖೆಗೆ ನೀಡುವಂತೆ ಸೂಚಿಸಬೇಕು.
ಕಳೆದ ವರ್ಷ ವಿಮೆಯಲ್ಲಿ ಭಾರಿ ಪ್ರಮಾಣದ ಮೊಸವಾಗಿದ್ದು, ಈ ಬಾರಿ ಹಾಗೇ ಆಗದಂತೆ ಎಚ್ಚರಿಕೆ ವಹಿಸುವ ಜತೆಗೆ ನಷ್ಟಗೊಂಡ ಬೆಳೆ ಸಮೀೆ ನಡೆಸಿ ರೈತರಿಗೆ ಬೆಂಬಲ ಹಾಗೂ ಪ್ರೋತ್ಸಾಹ ನೀಡಬೇಕು ಎಂದರು.
ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ಮಹಾಂತೇಶ ಮಮದಾಪುರ, ಮಹಾದೇವಪ್ಪ ತೇಲಿ, ಸಂಗಪ್ಪ ಟಕ್ಕೆ, ಶಂಕರ ವಾ, ಲಾಯಪ್ಪ ವಾ, ಸಚಿನ ಬಿರಾದಾರ ಮತ್ತಿತರರಿದ್ದರು.