

ತರೀಕೆರೆ: ತಾಲೂಕಿನ ಬೇಲೇನಹಳ್ಳಿ ಗ್ರಾಮದಲ್ಲಿ ಶಿವಮೊಗ್ಗ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳು ಮಣ್ಣಿನ ಪರೀಕ್ಷೆ ನಡೆಸಿ ರೈತರಿಗೆ ಮಣ್ಣಿನ ಮಾದರಿ ಸಂಗ್ರಹದ ಕುರಿತು ಅರಿವು ಮೂಡಿಸಿದರು.
ವಿದ್ಯಾರ್ಥಿನಿ ಅಮೃತ ಮಾತನಾಡಿ, ಜಮೀನಿನಲ್ಲಿರುವ ವಿವಿಧ ಮಣ್ಣನ್ನು ಪರೀಕ್ಷೆಗೊಳಪಡಿಸುವುದರಿಂದ ಉತ್ತಮ ಇಳುವರಿ ಪಡೆಯಲು ಸಹಕಾರಿಯಾಗಲಿದೆ ಎಂದರು. ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವ ವಿದ್ಯಾಲಯದ ವಿದ್ಯಾರ್ಥಿನಿಯರಾದ ಜಿ.ಪಿ.ಚಂದನ, ಚೈತನ್ಯ, ಪೂರ್ಣಿಮಾ, ನಿಸರ್ಗ, ಪ್ರಿಯಾಂಕ, ಪಾವರ್ತಿ, ರೈತರಾದ ಜಯಪ್ಪ, ಸುರೇಶ್ ಮತ್ತಿತರರಿದ್ದರು.