ಮತದಾನದ ಹಕ್ಕು ಕಡ್ಡಾಯ ಚಲಾಯಿಸಿ

12HBD01 (1)
ಚಿಟಗುಪ್ಪದಲ್ಲಿ ಶುಕ್ರವಾರ ಮತದಾನ ಜಾಗೃತಿಗಾಗಿ ಹಮ್ಮಿಕೊಂಡ ತಾಲೂಕು ಮಟ್ಟದ ವಾಕಥಾನ್‌ಗೆ ಜಿಲ್ಲಾಧಿಕಾರಿ ಗೋವಿಂದರಡ್ಡಿ ಚಾಲನೆ ನೀಡಿದರು. ಎಸ್‌ಪಿ ಚನ್ನಬಸವಣ್ಣ ಲಂಗೋಟಿ, ಜಿಪಂ ಸಿಇಒ ಗಿರೀಶ್ ಬದೋಲೆ, ಡಿವೈಎಸ್‌ಪಿ ಜೆ.ಎಸ್.ನ್ಯಾಮಗೌಡರ್, ತಾಪಂ ಇಒ ಶಿವಲೀಲಾ, ಪುರಸಭೆ ಸಿಒ ಶಿವಾನಂದ ಭೋಸ್ಲೆ, ಸಿಪಿಐ ಶ್ರೀನಿವಾಸ ಅಲ್ಲಾಪುರ, ಬಿಇಒ ವೆಂಕಟೇಶ ಗುಡಾಳ ಇತರರಿದ್ದರು.
Published on

ಚಿಟಗುಪ್ಪ: ದೇಶದ ಭವಿಷ್ಯ ರೂಪಿಸುವಲ್ಲಿ ಮತದಾನ ಅತ್ಯಂತ ಮಹತ್ವದಾಗಿದ್ದು, ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದ ಹಕ್ಕು ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರಡ್ಡಿ ಕರೆ ನೀಡಿದರು.

ಜಿಲ್ಲಾ, ತಾಲೂಕು ಆಡಳಿತ, ಪೊಲೀಸ್ ಇಲಾಖೆ ಹಾಗೂ ಸ್ವೀಪ್ ಸಮಿತಿ ಸಹಯೋಗದಡಿ ತಹಸಿಲ್ ಆವರಣದಲ್ಲಿ ಶುಕ್ರವಾರ ಲೋಕಸಭಾ ಚುನಾವಣೆ ನಿಮಿತ್ತ ಮತದಾನ ಜಾಗೃತಿಗಾಗಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ವಾಕಥಾನ್‌ಗೆ ಚಾಲನೆ ನೀಡಿದ ಅವರು, ಜನರಲ್ಲಿ ಮತದಾನ ಮಹತ್ವ ತಿಳಿಹೇಳಬೇಕು ಎಂದು ಸಲಹೆ ನೀಡಿದರು.

ತಹಸೀಲ್ದಾರ್ ರವೀಂದ್ರ ದಾಮಾ ಪ್ರಾಸ್ತಾವಿಕ ಮಾತನಾಡಿ, ತಾಲೂಕು ಮಟ್ಟದಂತೆ ಹಳ್ಳಿಗಳಲ್ಲೂ ಮತದಾನ ಹೆಚ್ಚಳಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದರು.

ತಹಸಿಲ್‌ನಿಂದ ಶುರುವಾದ ವಾಕಥಾನ್ ಭವಾನಿ ಮುಂದಿರ, ಗಾಂಧಿ ಚೌಕ್, ಬಸವರಾಜ ಚೌಕ್, ಶಿವಾಜಿ ಚೌಕ್ ಮುಖಾಂತರ ಸಾಯಿ ಕ್ರಿಕೆಟ್ ಮೈದಾನವರೆಗೆ ನಡೆಯಿತು. ಎಸ್‌ಪಿ ಚನ್ನಬಸವಣ್ಣ ಲಂಗೋಟಿ, ಜಿಪಂ ಸಿಇಒ ಗಿರೀಶ್ ಬದೋಲೆ, ಡಿವೈಎಸ್‌ಪಿ ಜೆ.ಎಸ್.ನ್ಯಾಮಗೌಡರ್, ತಾಪಂ ಇಒ ಶಿವಲೀಲಾ, ಎಇಇ ಸುನೀಲ ಪ್ರಭಾ, ಪುರಸಭೆ ಸಿಒ ಶಿವಾನಂದ ಭೋಸ್ಲೆ, ಸಿಪಿಐ ಶ್ರೀನಿವಾಸ ಅಲ್ಲಾಪುರ, ಬಿಇಒ ವೆಂಕಟೇಶ ಗುಡಾಳ ಇತರರಿದ್ದರು.

ಕ್ರಿಕೆಟ್ ಆಡಿ ಜಾಗೃತಿ: ವಾಕಥಾನ್ ಬಳಿಕ ಸಾಯಿ ಕ್ರೀಡಾಂಗಣದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕ್ರಿಕೆಟ್ ಪಂದ್ಯಾವಳಿ ನಡೆಸಿ ವಿನೂತನ ರೀತಿಯಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net