

ರಾಯಚೂರು: ಚುನಾವಣೆಗೆ ನಿಯೋಜನೆಗೊಂಡ ಅಧಿಕಾರಿಗಳು ವಹಿಸಿದ ಕಾರ್ಯವನ್ನು ಅತ್ಯಂತ ಜವಾಬ್ದಾರಿಯಿಂದ ಮತ್ತು ನಿಷ್ಠೆಯಿಂದ ನಿರ್ವಹಿಸಬೇಕೆಂದು ತಹಸೀಲ್ದಾರ್ ಸುರೇಶ ಶರ್ಮಾ ಹೇಳಿದರು.
ಇದನ್ನೂ ಓದಿ: ಜಾತಿ ಆಧಾರಿತ ಚುನಾವಣೆಯಲ್ಲ
ನಗರದ ಪಂ.ಸಿದ್ದರಾಮ ಜಂಬಲದಿನ್ನಿ ಜಿಲ್ಲಾ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಮತಗಟ್ಟೆ ಚುನಾವಣಾಧಿಕಾರಿಗಳು ಹಾಗೂ ಸಹಾಯಕ ಚುನಾವಣಾಧಿಕಾರಿಗಳಿಗೆ ಮತದಾನದ ತರಬೇತಿ ಕಾರ್ಯಾಗಾರದಲ್ಲಿ ಸೋಮವಾರ ಮಾತನಾಡಿದರು.
ಮತದಾನದ ದಿನ ಹಾಗೂ ಹಿಂದಿನ ದಿನದಂದು ಮತದಾನಕ್ಕೆ ಬೇಕಾದ ಸಿದ್ಧತೆಮಾಡಿಕೊಳ್ಳಬೇಕು. ಚುನಾವಣೆಯನ್ನು ಪಾರದರ್ಶಕ, ನಿಯಮಾನುಸಾರವಾಗಿ ನಡೆಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಿ.
ತರಬೇತಿದಾರರು ನೀಡುವ ಮಾಹಿತಿ ಪಡೆದು ಗೊಂದಲಗಳಿದ್ದರೆ ಪರಿಹರಿಸಿಕೊಳ್ಳಬೇಕು. ತರಬೇತಿಯಲ್ಲಿ ತಪ್ಪದೆ ಪಾಲ್ಗೊಂಡು ಮಾಹಿತಿ ಪಡೆಯಬೇಕು. ಚುನಾವಣೆ ವೇಳೆ ಗೊಂದಲಾಕ್ಕಿಡಾಗದೆ ನಿಮ್ಮ ಕೇಂದ್ರದ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಎಚ್ಚರವಹಿಸಿ ಎಂದು ಸೂಚಿಸಿದರು.
ಮತದಾನ ಕೇಂದ್ರದಲ್ಲಿ ಯಾವುದೇ ಸಮಸ್ಯೆ ಕಂಡುಬಂದರೆ ಸ್ಥಳೀಯ ಅಧಿಕಾರಿಗಳು ಹಾಗೂ ನಿರ್ವಹಣೆ ಮಾಡುವವರ ಗಮನಕ್ಕೆ ತರಬೇಕು. ಕರ್ತವ್ಯಲೋಪ ಕಂಡುಬಂದರೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ಭಂಡಾರಿ, ಮಾಸ್ಟರ್ ತರಬೇತುದಾರ ಸದಾಶಿವಪ್ಪ, ಡಯಟ್ ಪ್ರಾಚಾರ್ಯ ಶ್ರೀನಿವಾಸರೆಡ್ಡಿ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯ ಶ್ರೀನಿವಾಸ, ದಂಡಪ್ಪ ಬಿರಾದಾರ ಇತರರಿದ್ದರು.