

ತ್ಯಾಮಗೊಂಡ್ಲು : ಸರ್ಕಾರಿ ಬ್ಯಾಂಕಿಗಿಂತ ಸಹಕಾರಿ ಬ್ಯಾಂಕ್ ಹೆಚ್ಚಿನ ಸೌಲಭ್ಯ ನೀಡುತ್ತಿರುವುದರಿಂದ ಇಲ್ಲಿಯೇ ವಹಿವಾಟು ಮಾಡಿ ಸಂದ ಆರ್ಥಿಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತ್ಯಾಮಗೊಂಡ್ಲು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂದ ಅಧ್ಯಕ್ಷ ಸಿ.ಆಶ್ವತ್ಥಕುಮಾರ್ ಮನವಿ ಮಾಡಿದರು. ನೆಲಮಂಗಲ ತಾಲೂಕಿನ ತ್ಯಾಮಗೊಂಡ್ಲು ಸಹಕಾರ ಸಂದಲ್ಲಿ ಮಂಗಳವಾರ ಆಯೋಜಿಸಿದ್ದ ಸರ್ವ ಸದಸ್ಯರ ಸಾಮಾನ್ಯ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಸಾಲ ಪಡೆದ ರೈತರು ಸುಸ್ತಿದಾರರಾಗದೆ ಸಾಲ ತೀರಿಸಿದರೆ ಇನ್ನಷ್ಟು ರೈತರಿಗೆ ಸಾಲ ನೀಡಬಹುದು ಎಂದರು.
ಕಳೆದ ಸಭೆಯಲ್ಲಿ ರೈತರ ಬೇಡಿಕೆಯಂತೆ ಮರಣ ಸಹಾಯ ಧನವನ್ನು ಐದು ಸಾವಿರ ದಿಂದ ಏಳೂವರೆ ಸಾವಿರಕ್ಕೆ ಹೆಚ್ಚಿಸ ಲಾಗಿದೆ. ಕಳೆದ ಸಾಲಿನಲ್ಲಿ 18 ಜನರಿಗೆ ಮರಣ ಸಹಾಯ ಧನ ನೀಡಲಾಗಿದೆ. ಇದೀಗ ದೊಡ್ಡಬೆಲೆ ಮತ್ತು ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿ ಮುಖ್ಯ ಸ್ಥಾನಗಳಲ್ಲಿದ್ದು, ಬರುತ್ತಿರುವ ಲಾಭದಿಂದ ವಾಣಿಜ್ಯ ಉದ್ದೇಶದ ನಿವೇಶನ ಖರೀದಿಸುವ ಪ್ರಸ್ತಾವನೆ ಅಂಗೀಕರಿಸಲಾಗಿದೆ. ಸಂದ ಆಸ್ತಿಯನ್ನು ಗ್ರಾಪಂನಲ್ಲಿಯೇ ಖಾತೆ ಮಾಡಿಸಲಾಗಿದೆ ಎಂದು ನಿರ್ದೇಶಕ ಕಾರೇಹಳ್ಳಿ ಗುರುಪ್ರಕಾಶ್ ತಿಳಿಸಿದರು.
ಪ್ರಸ್ತುತ ಸಂಕ್ಕೆ ಒಟ್ಟು < 18.20 ಲಕ್ಷ ವ್ಯಾಪಾರ ಲಾಭ, ಮತ್ತು 2.40 ಲಕ್ಷ ರೂಪಾಪಾಯಿ ನಿವ್ವಳ ಲಾಭ ಬಂದಿದೆ. ಕೆಸಿಸಿ ಸಾಲ 7.11 ಕೋಟಿ ರೂಪಾಯಿಯನ್ನು 888 ಜನರಿಗೆ ನೀಡಲಾಗಿದೆ. ಕುರಿ ಮತ್ತು ಮೇಕೆ ಸಾಕಾಣಿಕೆಗೆ < 35 ಲಕ್ಷ ಸಾಲವನ್ನು ಮೂವರಿಗೆ ನೀಡಲಾಗಿದೆ. ಸಿ ಶಕ್ತಿ ಸಂಗಳಿಗೆ < 35 ಲಕ್ಷ ನೀಡಲಾಗಿದೆ. ಬಿಡಿಸಿಸಿ ಬ್ಯಾಂಕಿನಲ್ಲಿ 31 ಲಕ್ಷ ರೂ. ಠೇವಣಿ ಇರಿಸಲಾಗಿದೆ. ಪ್ರಸ್ತುತ ಸಾಲಿನಲ್ಲಿ 16.50 ಲಕ್ಷ ರೂಪಾಯಿ ಅಂದಾಜು ಪಟ್ಟಿ ತಯಾರಿಸಲಾಗಿದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಅಂಕಗಳಿಸಿದ ಸದಸ್ಯರ ಎಂಟು ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗಿದೆ ಎಂದು ಸಿಇಒ ಶಿವಕುಮಾರ್ ಮಾಹಿತಿ ನೀಡಿದರು.
ಮಾಜಿ ಅಧ್ಯಕ್ಷ ಸಿದ್ದರಾಜು ಮಾತನಾಡಿ, ಲೆಕ್ಕಪರಿಶೋಧಕರ ವರದಿಯನ್ನು ಸರಳವಾಗಿ ರೈತರಿಗೆ ಅರ್ಥವಾಗುವಂತೆ ತಯಾರಿಸಿ ಮಂಡಿಸಲು ಸಲಹೆ ನೀಡಿದರು. ಬ್ಯಾಂಕಿನಲ್ಲಿ ರೈತರಿಗೆ ದೊರಕುವ ವಿವಿಧ ಸೌಲಭ್ಯಗಳ ಬಗ್ಗೆ ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕರರು ವಿವರಿಸುವಂತೆ ಒತ್ತಾಯಿಸಿದರು. ನಿರ್ದೇಶಕರಾದ ಟಿ.ಎನ್.ಹನುಮಂತರಾಜು, ಡಿ.ಪುಟ್ಟಸ್ವಾಮಿ, ಪ್ರಕಾಶ್, ದೇವರಾಜು, ಹನುಮಂತರಾಜು, ಸಿದ್ದಯ್ಯ, ಡಿ.ಎಮ್.ನಾರಾಯಣಪ್ಪ, ಟಿ.ಎನ್.ವೀಣಾ, ಸಿ.ವೇಣು, ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ರವಿಕುಮಾರ್, ಷೇರುದಾರರಾದ ಚನ್ನಬಸಪ್ಪ, ಹೇಮಚಂದ್ರ ಮೊದಲಿಯಾರ್, ಚಂದ್ರಪ್ಪ, ರಾಮಾಂಜನೇಯ, ಸಿಬ್ಬಂದಿ ಎಲ್.ಜಯಂತ್, ಕೆ.ಜಿ.ಧನರಾಜು ಇದ್ದರು.