ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಿ - ವಜ್ಜರಮಟ್ಟಿ ಮುಖಂಡರು, ಗ್ರಾಪಂ ಸದಸ್ಯರು ಆಗ್ರಹ

Vajjaramatti
ಬಾಗಲಕೋಟೆ ನಗರದಲ್ಲಿ ವಜ್ಜರಮಟ್ಟಿ ಗ್ರಾಮದ ಮುಖಂಡರು, ಗ್ರಾಪಂ ಸದಸ್ಯರು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಿದರು. ಗೋಪಾಲ ಬಟಕುರ್ಕಿ, ಕಾಶೀನಾಥ ಹುಡೇದ, ಎಚ್.ಕೆ. ಮಡಿವಾಳ, ಎನ್.ಕೆ. ಲೋಕಾಪುರ ಇತರರಿದ್ದರು.
Published on

ಬಾಗಲಕೋಟೆ : ಜಿಲ್ಲೆಯ ಮುಧೋಳ ತಾಲೂಕಿನ ವಜ್ಜರಮಟ್ಟಿ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಶೀಘ್ರ ಚುನಾವಣೆ ನಡೆಸಬೇಕೆಂದು ಗ್ರಾಮದ ಮುಖಂಡರು, ಗ್ರಾಪಂ ಸದಸ್ಯರು ಆಗ್ರಹಿಸಿದ್ದಾರೆ.

ನವನಗರದ ಜಿಲ್ಲಾಡಳಿತ ಭವನದಲ್ಲಿ ಬುಧವಾರ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಸಿದ ಅವರು, ಗ್ರಾಪಂ ಅಧ್ಯಕ್ಷ ಸ್ಥಾನ ರಾಜೀನಾಮೆಯಿಂದಾಗಿ ಖಾಲಿಯಾಗಿದೆ. ಕರ್ನಾಟಕ ಪಂಚಾಯಿತ್ ರಾಜ್ಯ ಕಾಯ್ದೆಯನ್ವಯ ತಾವುಗಳು ಆ.23 ರಂದು 20 ದಿನಗಳಲ್ಲಿ ಚುನಾವಣೆ ನಡೆಸುವಂತೆ ಜಮಖಂಡಿ ಉಪವಿಭಾಗಾಧಿಕಾರಿ, ಮುಧೋಳ ತಾಪಂ ಇಒ ಹಾಗೂ ತಹಸೀಲ್ದಾರರಿಗೆ ಆದೇಶಿಸಿದ್ದರೂ ಈ ವರೆಗೆ ಯಾವುದೇ ಚುನಾವಣೆ ಪ್ರಕ್ರಿಯೆ ನಡೆದಿಲ್ಲ. ಚುನಾವಣೆ ಅಧಿಕಾರಿಯನ್ನೂ ನೇಮಕ ಮಾಡಿಲ್ಲ. ಅಧಿಕಾರಿಗಳು ಪ್ರಭಾವಿಗಳ ಒತ್ತಡಕ್ಕೆ ಮಣಿಯುತ್ತಿದ್ದಾರೆ ಎನ್ನುವ ಅನುಮಾನ ಮೂಡಿದೆ. ಕೂಡಲೇ ಗಮನ ಹರಿಸಿ ಚುನಾವಣೆ ಪ್ರಕ್ರಿಯೆ ಚುರುಕುಗೊಳಿಸಬೇಕು ಎಂದು ಒತ್ತಾಯಿಸಿದರು.

ಗೋಪಾಲ ಬಟಕುರ್ಕಿ, ಕಾಶೀನಾಥ ಹುಡೇದ, ಎಚ್.ಕೆ. ಮಡಿವಾಳ, ಎನ್.ಕೆ. ಲೋಕಾಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net