ಬೆಳೆ ನಷ್ಟ ಸಮೀಕ್ಷೆ ನಡೆಸಿ ಪರಿಹಾರ ನೀಡಲಿ

FotoJet 333
Published on

ರೈತ ಸಂಘದಿಂದ ಒತ್ತಾಯ ಮುಳಬಾಗಿಲಿನಲ್ಲಿ ಪ್ರತಿಭಟನೆ

ಮುಳಬಾಗಿಲು: ಮುಂಗಾರು, ಹಿಂಗಾರು ಮಳೆಯಿಂದ ನಷ್ಟವಾಗಿರುವ ತೋಟಗಾರಿಕಾ ಬೆಳೆ ಸಮೀಕ್ಷೆ ವಾಡಲು ವಿಶೇಷ ತಂಡ ರಚಿಸಿ ಪ್ರತಿ ಎಕರೆಗೆ 2 ಲಕ್ಷ ರೂ. ಪರಿಹಾರವನ್ನು ರಾಜ್ಯ ಸರ್ಕಾರ ನೀಡಬೇಕು ಎಂದು ರೈತ ಸಂದ ಮುಖಂಡರು ಮುಳಬಾಗಿಲಿನ ಹನುವಾನ್ ವೃತ್ತದಲ್ಲಿ ಪ್ರತಿಭಟಿಸಿದರು.

ಇಲಾಖೆಯಿಂದ ಗುಣಮಟ್ಟದ ಬಿತ್ತನೆ ಬೀಜ ವಿತರಣೆ ವಾಡುವ ತೆಗೆ ಅನಧಿಕೃತ ನರ್ಸರಿಗಳಿಗೆ ಕಡಿವಾಣ ಹಾಕಬೇಕೆಂದು ಪ್ರತಿಭಟಿಸಿ ತೋಟಗಾರಿಕೆ ಅಧಿಕಾರಿ ರವಿಕುವಾರ್ ರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಬೆಳೆದಿರುವ ಟೊಮ್ಯಾಟೊ, ಆಲೂಗಡ್ಡೆ, ಕ್ಯಾಪ್ಸಿಕಂ ಹಾಗೂ ಇತರ ಬೆಳೆಗಳಿಗೆ ಅಂಗವಾರಿ ರೋಗ ಬಂದಿದ್ದು, ತೋಟದಲ್ಲಿಯೇ ಬೆಳೆ ನಾಶವಾಗಿದೆ. ಹಾಕಿದ ಬಂಡವಾಳ ಕೈಗೆ ಸಿಗದೆ ರೈತು ಸಂಕಷ್ಟದಲ್ಲಿದ್ದಾರೆ. ಅಧಿಕಾರಿಗಳು ಬೆಳೆ ಸಮೀಕ್ಷೆ ವಾಡಿ ನಷ್ಟ ಪರಿಹಾರ ವಿತರಿಸುವ ಮೂಲಕ ರೈತರ ರಕ್ಷಣೆ ನಿಲ್ಲಬೇಕು ಎಂದು ರೈತ ಸಂದ ಉಪಾದ್ಯಕ್ಷ ಕೆ.ನಾರಾಯಣಗೌಡ ಒತ್ತಾಯಿಸಿದರು.

ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ವಾತನಾಡಿ, ವಾಣಿಜ್ಯ ಬೆಳೆಗಳಿಗೆ ರೈತರು ಕಡ್ಡಾಯವಾಗಿ ವಿಮೆ ಹಣ ಪಾವತಿಸುತ್ತಾರೆ. ಅತಿವೃಷ್ಟಿ, ಅನಾವೃಷ್ಟಿ ಸಮಯದಲ್ಲಿ ಬೆಳೆ ನಷ್ಟವಾದಾಗ ರೈತರ ತೆ ನಿಲ್ಲಬೇಕಿದ್ದ ವಿವಾ ಕಂಪನಿಗಳು ನಾಪತ್ತೆ ಆಗುತ್ತವೆ. ರೈತರು ಕರೆ ವಾಡಿದರೆ ಸ್ವಿಚ್ಡ್‌ಆ್ ಆಗುತ್ತದೆ. ರೈತರನ್ನು ಯಾವಾರಿಸಿ ಕೋಟಿ, ಕೋಟಿ ವಿಮೆ ಹಣ ಲೂಟಿ ವಾಡುತ್ತಿದ್ದರೂ ಅಧಿಕಾರಿಗಳಿಗೆ ಕಂಪನಿಗಳ ಮೇಲೆ ಹಿಡಿತವಿಲ್ಲದಂತಾಗಿದೆ ಎಂದು ಆರೋಪ ವಾಡಿದರು.

ಜುಬೇರ್‌ಪಾಷಾ, ಹೆಬ್ಬಣಿ ಆನಂದ್‌ರೆಡ್ಡಿ, ಅಂಬ್ಲಿಕಲ್ ಮಂಜುನಾಥ್, ಕೇಶವ, ವೇಣು, ನಲ್ಲಾಂಡಹಳ್ಳಿ ಶಂಕರ್, ಗಿರೀಶ್, ಮಂಗಸಂದ್ರ ತಿಮ್ಮಣ್ಣ, ಸುಪ್ರೀಂ ಚಲ, ಮುನಿರಾಜು, ನಾಗರಾಜು, ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net