ಶ್ರೀ ರಂಭಾಪುರಿ ಜಗದ್ಗುರುಗಳ ಸಂತಾಪ

Published on

ಲಿಂಗಸುಗೂರು: ತೆಲಂಗಾಣ ಕೊಲ್ಲಿಪಾಕಿಗೆ ಭೇಟಿ ನೀಡಿ ಮರಳುವಾಗ ಸಂಭವಿಸಿದ ರಸ್ತೆ ಅಪಘಾತದಲ್ಲಿ ಲಿಂಗಸುಗೂರು ಪ್ರಜಾವಾಣಿ ವರದಿಗಾರ ಬಿ.ಎ.ನಂದಿಕೋಲಮಠ ನಿಧನ ಹೊಂದಿದ್ದು ಅವರ ಅಗಲಿಕೆಗೆ ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಸಂತಾಪ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷದ ದಸರಾ ಸಂದರ್ಭದಲ್ಲಿ ಬಸವರಾಜ ನಂದಿಕೋಲಮಠ ಅವರು ಸಕ್ರಿಯವಾಗಿ ಪಾಲ್ಗೊಂಡಿದ್ದರು. ತಮ್ಮನ್ನು ಭೇಟಿ ಮಾಡಿ ಮರಳುವಾಗ ನಡೆದ ಈ ದುರ್ಘಟನೆ ತಮಗೆ ಅತೀವ ನೋವನ್ನುಂಟು ಮಾಡಿದೆ.ಆಗಲಿದ ಅವರ ಆತ್ಮಕ್ಕೆ ಪರಮಾತ್ಮನು ಚಿರ ಶಾಂತಿ ನೀಡಲಿ ಹಾಗೂ ಅವರ ಆಗಲಿಕೆಯ ನೋವು ಸಹಿಸುವ ಶಕ್ತಿಯನ್ನು ಕುಟುಂಬಕ್ಕೆ ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net