ಬಹುಭಾಷಾ ಪಂಡಿತ ಪ್ರೊ.ಕರಿಮುದ್ದೀನ್‌ಗೆ ವಿವಿಧ ಸಂಘಟನೆಗಳಿಂದ ಶ್ರದ್ಧಾಂಜಲಿ

1
Published on

ಮಂಡ್ಯ: ನಗರದ ಪ್ರವಾಸಿಮಂದಿರದಲ್ಲಿ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಘಟಕದಿಂದ ಬಹುಭಾಷಾ ಪಂಡಿತ ಪ್ರೊ.ಕರಿಮುದ್ದೀನ್ ಅವರಿಗೆ ಶ್ರದ್ಧಾಂಜಲಿ ಸಭೆ ಆಯೋಜಿಸಲಾಗಿತ್ತು.

ವಿಚಾರವಾದಿ ಡಾ.ಸಂಜಯ್ ಕುಮಾರ್ ಮಾತನಾಡಿ, ಒಬ್ಬ ಹಿಂದು ಉತ್ತಮ ಹಿಂದು ಆಗಬೇಕು, ಒಬ್ಬ ಮುಸ್ಲಿಂ ಒಬ್ಬ ಉತ್ತಮ ಮುಸ್ಲಿಂ ಆಗಿರಬೇಕು. ಆಗ ಮಾತ್ರ ಮತಾಂತರದ ಪ್ರಶ್ನೆಯೇ ಇರುವುದಿಲ್ಲ. ಏಕೆಂದರೆ ಇಲ್ಲಿ ಉತ್ತಮವಾಗಿಯೇ ಆಗಿರುವುದರಿಂದ ನಿಜವಾದ ಆಧ್ಯಾತ್ಮಿಕ ವ್ಯಕ್ತಿಯಾಗಿರುತ್ತಾನೆ. ಇದು ಪ್ರೊ.ಕರಿಮುದ್ದೀನ್ ಅವರಿಗೆ ತುಂಬಾ ಕರಗತವಾಗಿತ್ತು ಎಂದು ವಿವರಿಸಿದರು.

ಪರಿಷತ್‌ ಸದಸ್ಯ ಸುನಂದಾ ಜಯರಾಂ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರು ವೈಚಾರಿಕತೆಯ ನೆಲೆಗಟ್ಟಿನಲ್ಲಿ ಸಮಾನತೆಯಿಂದ ನೋಡುತ್ತಿದ್ದರು. ಅದೇ ಮಾದರಿಯಲ್ಲಿ ಪ್ರೊ.ಕರಿಮುದ್ದೀನ್, ಎಚ್.ಎಲ್.ಕೇಶವಮೂರ್ತಿ ಅವರು ಸಾಗಿದ್ದರು ಎಂದರು.

ಪರಿಷತ್‌ನ ಜಿಲ್ಲಾಧ್ಯಕ್ಷ ಶಿವಲಿಂಗಯ್ಯ, ಬಿ.ಟಿ.ವಿಶ್ವನಾಥ್, ಗೌರವಾಧ್ಯಕ್ಷ ತೂಬಿನಕೆರೆ ಲಿಂಗರಾಜು, ಗುರುಮೂರ್ತಿ, ಮಂಗಲ ಲಂಕೇಶ್, ನಿವೃತ್ತ ಪ್ರಾಂಶುಪಾಲ ಚಂದ್ರಶೇಖರ್, ಗೋಪನಹಳ್ಳಿ ಕೆಂಪರಾಜು, ದುಂಡಲಿಂಗರಾಜು, ವಸಂತಮ್ಮ, ವೆಂಕಟಾಚಲಯ್ಯ, ಜಯರಾಂ, ಕಿರಂಗೂರು ಪಾಪು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net