ಕೃ.ನರಹರಿ ನಿಧನಕ್ಕೆ ಸಂತಾಪ

Condolences on the passing of Krishna Narahari
Published on

ವಿಜಯಪುರ: ಆರ್​ಎಸ್​ಎಸ್​ ೇತ್ರೀಯ ಕಾರ್ಯವಾಹ, ರಾಷ್ಟ್ರೀಯ ಶೈಕ್ಷಣಿಕ ಮಹಾಸಂದ ಅಖಿಲ ಭಾರತೀಯ ಅಧ್ಯ, ವಿ.ಪ. ಮಾಜಿ ಸದಸ್ಯ ಕೃ. ನರಹರಿ ಅವರ ನಿಧನ ಅಘಾತ ತಂದಿದೆ ಎಂದು ಬಿಜೆಪಿ ಜಿಲ್ಲಾಧ್ಯ ಗುರುಲಿಂಗಪ್ಪ ಅಂಗಡಿ ಹೇಳಿದರು.ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಸಂತಾಪ ಸೂಚಿಸಿ ಮಾತನಾಡಿದ ಅವರು, ನರಹರಿ ಅವರು ಆದರ್ಶದ ಬೆಳಕಾಗಿದ್ದವರು ಎಂದರು.

ವಿ.ಪ. ಮಾಜಿ ಸದಸ್ಯ ಅರುಣ ಶಹಾಪೂರ ಮಾತನಾಡಿ, ನರಹರಿಯವರ ಅಗಲಿಕೆಯಿಂದ ಸಂ ಪರಿವಾರ, ಸಮಾಜ ಹಾಗೂ ದೇಶಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಸಂತಾಪ ಸೂಚಿಸಿದರು.ಮುಖಂಡರಾದ ಚಂದ್ರಶೇಖರ ಕವಟಗಿ, ಮೇಯರ್​ ಎಂ.ಎಸ್​. ಕರಡಿ, ಸಂಜೀವ ಐಹೊಳಿ, ಈರಣ್ಣ ರಾವೂರ, ಮಳುಗೌಡ ಪಾಟೀಲ, ಸುರೇಶ ಬಿರಾದಾರ, ಭೀಮಾಶಂಕರ ಹದನೂರ, ಸಂದೀಪ ಪಾಟೀಲ, ಕಾಂತು ಶಿಂಧೆ, ವಿಜಯ ಜೋಶಿ, ಪಾಲಿಕೆ ಸದಸ್ಯರಾದ ರಾಜು ಮಗಿಮಠ, ಜವಾಹರ ಗೋಸಾವಿ, ವಿಠಲ ಹೊಸಪೇಟ, ಮಹೇಶ ಒಡೆಯರ, ಕ್ರಷ್ಣಾ ಗುನ್ಹಾಳಕರ, ಶಿವಾನಂದ ಭುಯ್ಯಾರ, ಪಾಪುಸಿಂಗ ರಜಪೂತ, ಚಿನ್ನು ಚಿನಗುಂಡಿ, ಭರತ ಕುಲಕರ್ಣಿ ಮತ್ತಿತರರಿದ್ದರು.

ವಿ.ಪ. ಮಾಜಿ ಸದಸ್ಯ ಕೃ. ನರಹರಿ ಅವರ ನಿಧನದ ಹಿನ್ನೆಲೆಯಲ್ಲಿ ವಿಜಯಪುರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಂ.ಎಸ್​. ಕರಡಿ, ಸುರೇಶ ಬಿರಾದಾರ, ರಾಜು ಮಗಿಮಠ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net