ಶಂಕರನಾರಾಯಣ ಭಟ್‌ಗೆ ನುಡಿನಮನ

Published on

ಕಾಸರಗೋಡು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ, ಸಹಕಾರ ಭಾರತಿಯ ಕಾಸರಗೋಡು ಜಿಲ್ಲಾ ಸಂಘಟನಾ ಪ್ರಮುಖ್, ಹಿರಿಯ ಪತ್ರಕರ್ತ ಎಂ.ಕೆ.ಶಂಕರನಾರಾಯಣ ಭಟ್ ಅವರ ಗೌರವಾರ್ಥ ಸಂತಾಪ ಸೂಚಕ ಸಭೆ ಕುಂಬಳೆಯಲ್ಲಿ ಜರುಗಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಮುಖಂಡ ಕಲ್ಲಡ್ಕ ಡಾ.ಪ್ರಭಾಕರ ಭಟ್, ಕುಟುಂಬ ಪ್ರಬೋಧನ್ ಅಖಿಲ ಭಾರತ ಕಾರ್ಯಕಾರಿ ಸಮಿತಿ ಸದಸ್ಯರಾದ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಕಾಸರಗೋಡು ಜಿಲ್ಲಾ ಸಂಘಚಾಲಕ್ ಪ್ರಭಾಕರನ್ ನಾಯರ್ ಮುಂತಾದವರು ನುಡಿನಮನ ಸಲ್ಲಿಸಿದರು.

ಬಿಜೆಪಿ ಕೇರಳ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ರವೀಂದ್ರನ್, ಸಹಕಾರ ಭಾರತಿಯ ಪ್ರಾಂತ್ಯ ಅಧ್ಯಕ್ಷ ವಕೀಲ ಕರುಣಾಕರನ್ ನಂಬ್ಯಾರ್, ಪ್ರಾಂತ್ಯ ಉಪಾಧ್ಯಕ್ಷ ಐತ್ತಪ್ಪ ಮವ್ವಾರು, ರಾಷ್ಟ್ರೀಯ ಸೇವಿಕಾ ಸಮಿತಿ ಪ್ರಾಂತ್ಯ ಬೌದ್ಧಿಕ್ ಪ್ರಮುಖ್ ಸರಿತಾ ದಿನೇಶ್, ವಿಶ್ವ ಹಿಂದು ಪರಿಷತ್ ಜಿಲ್ಲಾ ನೇತಾರ, ಕ್ಯಾಂಪ್ಕೊ ನಿರ್ದೇಶಕ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಬಿ.ಎಂ.ಎಸ್.ಕುಂಬಳೆ ವಲಯ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ನೀರೊಳಿಕೆಯ ಶ್ರೀ ಮಾತಾ ಬಾಲಿಕಾ ಆಶ್ರಮದ ಅಧ್ಯಕ್ಷ ತಲೆಂಗಳ ನಾರಾಯಣ ಭಟ್, ಕುಂಬಳೆ ಸೇವಾ ಸಹಕಾರಿ ಬಿಲ್ಡಿಂಗ್ ಸೊಸೈಟಿ ಅಧ್ಯಕ್ಷ ರಾಜಾರಾಮ ಕಾಮತ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net