ಪತ್ರಕರ್ತ ವಿನೋದ್‌ಗೆ ಶ್ರದ್ಧಾಂಜಲಿ

19-kgl-2
Published on

ಕೊಳ್ಳೇಗಾಲ : ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಮಂಗಳವಾರ ಪತ್ರಕರ್ತ ವಿನೋದ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಸಂಘದ ಪದಾಧಿಕಾರಿಗಳು ಹಾಗು ಸದಸ್ಯರು ವಿನೋದ್ ಭಾವಚಿತ್ರಕ್ಕೆ ಪುರ್ಷ್ಪಾಚನೆ ಮಾಡಿದರು. ಸಂಘದ ಅಧ್ಯಕ್ಷ ಸಿದ್ದರಾಜು ಮಾತನಾಡಿ, ಭಾನುವಾರ ಮೈಸೂರಿನಲ್ಲಿ ಬೈಕ್ ಅಪಘಾತದಲ್ಲಿ ಮೃತರಾದ ವಿನೋದ್ ಉತ್ಸಾಹಿ ಪತ್ರಕರ್ತರಾಗಿದ್ದರು. ಇವರ ಅಗಲಿಕೆ ನೋವು ಉಂಟು ಮಾಡಿದೆ ಎಂದರು. ಸಂಘದ ಮಾಜಿ ಅಧ್ಯಕ್ಷ ಡಿ.ನಟರಾಜು ಮಾತನಾಡಿದರು. ಸದಸ್ಯರು ಹಾಜರಿದ್ದರು.
.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net