

ನೆಲಮಂಗಲ : ಬಿನ್ನಮಂಗಲದ ವಿಶ್ವಶಾಂತಿ ಆಶ್ರಮದ ಬಳಿ ಕ್ಷುಲ್ಲಕ ಕಾರಣಕ್ಕೆ ಚರಂಡಿಗೆ ತಳ್ಳಿ ಕಾಂಡಿಮೆಂಟ್ಸ್ ಮಾಲೀಕನನ್ನು ಹತ್ಯೆ ಮಾಡಲಾಗಿದೆ. ಅರಿಶಿಣಕುಂಟೆ ನಿವಾಸಿ ಸೋಮಣ ್ಣ(40) ಮೃತ. ಕೊಲೆ ಆರೋಪದ ಮೇಲೆ ಬೆಂಗಳೂರಿನ ಪಂತರಪಾಳ್ಯ ನಿವಾಸಿ ಲ್ಮಪ್ರಸಾದ್ (28) ಎಂಬಾತನನ್ನು ಬಂಧಿಸಲಾಗಿದೆ.
ಮೂಲತ@ ಕನಕಪುರ ತಾಲೂಕಿನ ಕುರುಬರದೊಡ್ಡಿಯ ಸೋಮಣ್ಣ ಸುಮಾರು 8 ವರ್ಷದಿಂದ ವಿಶ್ವಶಾಂತಿ ಆಶ್ರಮದ ಬಳಿ ಕಾಂಡಿಮೆಂಟ್ಸ್ ಅಂಗಡಿ ನಡೆಸುತ್ತಿದ್ದರು. ಬುಧವಾರ ರಾತ್ರಿ 11 ಗಂಟೆಗೆ ಅಂಗಡಿ ಬೀಗ ಹಾಕಿ ಬೈಕ್ನಲ್ಲಿ ಮನೆಗೆ ತೆರಳುವಾಗ ಬೈಕ್ನಲ್ಲಿ ಪೆಟ್ರೋಲ್ ಖಾಲಿಯಾದ್ದರಿಂದ ಸೋಮಣ್ಣನನ್ನು ಅಂಗಡಿ ಬಳಿ ಕುಳಿತುಕೊಳ್ಳುವಂತೆ ಹೇಳಿ ಪುತ್ರ ನಿತೀನ್ ಪೆಟ್ರೋಲ್ ಹಾಕಿಸಿಕೊಳ್ಳಲು ಹೋಗಿದ್ದಾನೆ. ಈ ವೇಳೆ ಆಟೋದಲ್ಲಿ ಬಂದ ಲ್ಮಪ್ರಸಾದ್ ದಾರಿಯಲ್ಲಿ ಹೋಗುತ್ತಿದ್ದ ನಿತೀನನ್ನು ಪ್ರಶ್ನಿಸಿ ಮೊಬೈಲ್ ಕಿತ್ತುಕೊಂಡು ಹಲ್ಲೆ ಮಾಡಿದ್ದಾನೆ. ಬಳಿಕ ಅವನನ್ನು ಕರೆದುಕೊಂಡು ಅಂಗಡಿ ಬಳಿಗೆ ಬಂದಿದ್ದು, ಟನೆ ಬಗ್ಗೆ ವಿವರಿಸಿದ್ದಾನೆ. ಕೋಪಗೊಂಡ ಸೋಮಣ್ಣ ಹಾಗೂ ಲ್ಮಪ್ರಸಾದ್ ನಡುವೆ ಮಾತಿನ ಚಕಮಖಿ ಉಂಟಾಗಿದ್ದು, ಸೋಮಣ್ಣ ಲ್ಮಪ್ರಸಾದ್ಗೆ ಹೊಡೆದಿದ್ದು, ಆಗ ಲ್ಮಪ್ರಸಾದ್ ಸೋಮಣ್ಣನನ್ನು ಚರಂಡಿಗೆ ತಳ್ಳಿದಾಗ ತಲೆಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ನಗರ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೊಲೀಸರ ಮಿಂಚಿನ ಕಾರ್ಯಾಚರಣೆ : ಪ್ರಕರಣ ದಾಖಲಿಸಿಕೊಂಡ ನಗರ ಠಾಣೆ ಆರಕ್ಷಕ ನಿರೀಕ್ಷಕ ಭರತ್ಗೌಡ ನೇತೃತ್ವದ ಕೆಂ ಎಎಸ್ಐ ರು ಮತ್ತು ಸಿಬ್ಬಂದಿ ಮಂಜುನಾಥ್ ಒಳಗೊಂಡ ತಂಡವು ಮಿಂಚಿನ ಕಾರ್ಯಾಚರಣೆ ನಡೆಸಿ ಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಲ್ಮಪ್ರಸಾದ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.