ಮುನಿ ಮಹಾರಾಜರ ಹತ್ಯೆಗೆ ಖಂಡನೆ

web 5
Published on

ಧಾರವಾಡ: ಚಿಕ್ಕೋಡಿ ತಾಲೂಕು ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಶ್ರೀ ಕಾಮಕುಮಾರ ನಂದಿ ಮಹಾರಾಜರನ್ನು ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನೀಯ. ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಶ್ರೀ ಧರ್ಮಶಾಸ್ತ ಸೇವಾ ಸಮಿತಿ ಸಂಸ್ಥಾಪಕ ರಮೇಶ ಪಾತ್ರೋಟ ಗುರುಸ್ವಾಮಿಜಿ ತಿಳಿಸಿದ್ದಾರೆ.
ಪ್ರಕಟಣೆ ನೀಡಿರುವ ಅವರು, ಆಧ್ಯಾತ್ಮಿಕ ಹಾಗೂ ಧಾರ್ಮಿಕ ತತ್ವ ಸಿದ್ಧಾಂತ ಮತ್ತು ಮಾನವೀಯ ಮೌಲ್ಯಗಳ ಚೇತನಕ್ಕೆ ಕಾರಣೀಕರ್ತರಾದ ಮತ್ತು ಸಕಲ ಜೀವರಾಶಿಗೆ ಲೇಸ ಬಯಸುವ ಮುನಿಗಳನ್ನು ಹತ್ಯೆ ಮಾಡಿರುವುದು ಅಕ್ಷಮ್ಯ. ಲೋಕ ಕಲ್ಯಾಣಕ್ಕಾಗಿ ವರ್ಷದ 365 ದಿನ ಪೂಜೆ, ಪ್ರಾರ್ಥನೆ ಮಾಡುತ್ತಾರೆ. ಕ್ರಿಮಿ- ಕೀಟಗಳನ್ನು ಸಹ ಹತ್ಯೆ ಮಾಡದ ಮತ್ತು ಜನರಿಗೆ ಒಳಿತು ಮಾಡುವ ಸಮಾಜದ ಮುನಿಗಳನ್ನು ಅಮಾನುಷವಾಗಿ ಕೊಲೆ ಮಾಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಯಾವುದೇ ಧರ್ಮಿಯರಿಗೆ ತೊಂದರೆ ಮಾಡದೆ, ಸಮಾಜಕ್ಕೆ ಸಂಸ್ಕಾರ ನೀಡುವ ಗುರುಗಳು, ಸ್ವಾಮೀಜಿಗಳು, ಸಂತರು, ಶರಣರಿಗೆ ಸಮಾಜದಲ್ಲಿ ರಕ್ಷಣೆ ಸಿಗಬೇಕು ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net