

Condemnation of the Janivar abuse,ಅಥಣಿ: ಸಿಇಟಿ ಪರೀಕ್ಷೆ ಸಂದರ್ಭದಲ್ಲಿ ಜನಿವಾರಕ್ಕೆ ಅಪಚಾರ ಎಸಗಿರುವ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಿ ಶಾಶ್ವತವಾಗಿ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಅಥಣಿಯ ಜನಿವಾರಧಾರಿಗಳು ತಹಸೀಲ್ದಾರ್ ಸಿದರಾಯ ಭೋಸಗಿ ಮೂಲಕ ಸರ್ಕಾರಕ್ಕೆ ಶನಿವಾರ ಮನವಿ ಸಲ್ಲಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಸಮಾಜ ಅಥಣಿ ಘಟಕ, ಜೈನ ದಿಗಂಬರ ಸಮಾಜ ಸಂಘಟನೆ, ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ ಸಂಘಟನೆ, ಮರಾಠಾ ಕ್ಷತ್ರೀಯ ಸಮಾಜ ಸಂಘಟನೆ, ಗುಜರಾತಿ ಬ್ರಾಹ್ಮಣ ಸಮಾಜ ಸಂಘಟನೆ, ಆರ್ಯ ವೈಶ್ಯ ಸಮಾಜ, ಸವಿತಾ ಸಮಾಜ ಸಂಘಟನೆಯ ನೂರಾರು ಜನ ಬೈಕ್ ರ‌್ಯಾಲಿ ಮೂಲಕ ತೆರಳಿ ಮಿನಿವಿಧಾನ ಸೌಧಕ್ಕೆ ತೆರಳಿ ತಹಸೀಲ್ದಾರ್‌ರಿಗೆ ಮನವಿ ಸಲ್ಲಿಸಿದರು. ಜನಿವಾರವನ್ನು ಕತ್ತರಿಸುವ ಮೂಲಕ ಧಾರ್ಮಿಕ ನಂಬಿಕೆಗೆ ಧಕ್ಕೆ ತಂದಿದ್ದು, ಇಂತಹ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಹಿರಿಯರಾದ ಆರ್.ಎನ್.ಸಿದ್ದಾಂತಿ, ಉಮೇಶರಾವ ಬಂಟೋಡ್ಕರ, ಅರವಿಂದ ದೇಶಪಾಂಡೆ, ಬಿಂದುಮಾಧವ ಜೋಶಿ, ಶ್ರೀನಿವಾಸ ಜೋಶಿ, ಅರುಣ ಯಲಗುದ್ರಿ, ಭೀಮರಾವ ಬಡಿಗೇರ, ರವಿ ದೇಸಾಯಿ, ಉದಯ ಗುಂಡಾ, ಭರತ ಸೊಮಯ್ಯ, ರಥೋತ್ತಮ ಕಟ್ಟಿ, ಅನಿಲ ದೇಶಪಾಂಡೆ, ಗುಂಡು ಇಜಾರೆ, ಭಾವಿನ ಸೊಮಯ್ಯ, ಲಕ್ಷ್ಮಣ ರಾಮದಾಸಿ, ಮಾಧವ ಕೌಲಗುಡ್ಡ, ಚೈತನ್ಯ ಮಳಗಿಕರ, ಅವಿನಾಶ ಜಾಧವ, ವೆಂಕಟೇಶ ದೇಶಪಾಂಡೆ, ಸೌರಭ ಮಾಶಾಳ, ರಾಜು ಕರ್ಪೂರಶೆಟ್ಟಿ ಇತರರು ಇದ್ದರು.