

ಬೆಲಹೊಂಗಲ: ಭಾರತೀಯ ವಕೀಲ ಪರಿಷತ್ತಿನ ಸದಸ್ಯ ವೆ.ಆರ್.ಸದಾಶಿವರೆಡ್ಡಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಿ, ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ವಕೀಲರ ಸಂದಿಂದ ಸೋಮವಾರ ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪುರ ಅವರಿಗೆ ಮನವಿ ಸಲ್ಲಿಸಲಾಯಿತು.
ನೋಟರಿ ಸಂದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಎಸ್. ಚಿಕ್ಕನಗೌಡರ, ವಕೀಲರ ಸಂದ ಪ್ರಧಾನ ಕಾರ್ಯದರ್ಶಿ ವಿ.ಸಿ. ಕಟದಾಳ ಮಾತನಾಡಿ, ಏ.15ರಂದು ವಕೀಲ ವೆ.ಆರ್.ಸದಾಶಿವರೆಡ್ಡಿ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳು ಏಕಾಏಕಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈಗಾಗಲೇ ವಕೀಲರ ರಣೆಗಾಗಿ ಕಾಯ್ದೆ ಜಾರಿಯಾಗಿದ್ದರೂ, ದುಷ್ಕರ್ಮಿಗಳು ಯಾವುದೇ ಕಾನೂನಿನ ಭಯ ಇಲ್ಲದೆ ಕತ್ಯ ಎಸಗಿದ್ದಾರೆ. ತಪ್ಪಿತಸ್ಥರನ್ನು ಆದಷ್ಟು ಬೇಗ ಹಿಡಿದು ಕಠಿಣ ಕಾನೂನು ಕ್ರಮ ಕೆಗೊಳ್ಳಬೇಕು ಎಂದು ಅಗ್ರಹಿಸಿದರು.
ವಕೀಲರಾದ ಸಿ.ಎ. ವನ್ನೂರ, ಸಿದ್ಲಿಂಗ ಬೋಳಶೆಟ್ಟಿ, ಎಸ್.ಪಿ. ಕುಲಕರ್ಣಿ, ಎಸ್.ಬಿ. ಹಣ್ಣಿಕೇರಿ, ಜಿ. ಎ. ಅಂಗಡಿ, ಆರ್.ಎ್. ಕುರುಬರ, ಪಿ.ಬಿ. ಬಡಿಗೇರ, ಎಸ್.ಎಚ್. ಮಾಳಗಿ, ಎಂ.ಜಿ. ಅನಪಿನ, ಪಿ.ಎಸ್. ಚೌಬಾರಿ, ಯು.ಕೆ. ಬುಲಾಕೆ, ಎಸ್.ಜಿ. ಚಿಕ್ಕಮಠ, ಎಸ್.ಬಿ. ಬಡಿಗೇರ, ಬಿ.ಆರ್. ಹರಿದಾಸ, ಅಶ್ವಿನಿ ಪೀರಗೋಜಿ, ವಿಜಯಲಕ್ಷಿ$್ಮ ಹಿರೇಮಠ, ಎಂ.ಎಂ. ಅಬ್ಬಾಯಿ ಇತರರಿದ್ದರು.