ಧರ್ಮಸ್ಥಳ ವಿರುದ್ಧ ಅಪಪ್ರಚಾರಕ್ಕೆ ಖಂಡನೆ

ಧರ್ಮಸ್ಥಳ ಕ್ಷೇತ್ರ ದ ವಿರುದ್ಧ ಅವಹೇಳನ ಹೇಳಿಕೆ ಪ್ರತಿಭಟನೆ
Published on

ಅರಸೀಕೆರೆ ಗ್ರಾಮಾಂತರ: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಖಂಡಿಸಿ ತಾಲೂಕಿನ ಬಾಣಾವರದಲ್ಲಿ ಧರ್ಮಸ್ಥಳದ ಧರ್ಮದ ಉಳಿವಿಗಾಗಿ ಧರ್ಮಯುದ್ಧದ ಪ್ರತಿಭಟನಾ ಮೆರವಣಿಗೆ ಶನಿವಾರ ನಡೆಯಿತು.

ಗಣಪತಿ ದೇವಾಲಯದಿಂದ ಹುಳಿಯಾರು ರಸ್ತೆ ಮಾರ್ಗವಾಗಿ ಬಂದ ಪಟ್ಟಣದ ಪ್ರಮುಖ ರಸ್ತ್ತೆಗಳಲ್ಲಿ ಸಂಚರಿಸಿ ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಿದ್ದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.

ಬಿಜೆಪಿ ಮುಖಂಡ ಸಿ.ಆರ್.ಜಯಣ್ಣ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅವಮಾನ ಮಾಡಿರುವುದು ಇಡೀ ನಮ್ಮ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ. ಇದನ್ನು ನಾವು ಎಂದಿಗೂ ಸಹಿಸುವುದಿಲ್ಲ ಇಂತಹ ತಪ್ಪಿತಸ್ಥಿರಗೆ ಕಠಿಣ ಕ್ರಮ ಆಗಲೇಬೇಕು ಎಂಬುದೇ ನಮ್ಮ ಈ ಧರ್ಮ ಯುದ್ಧ ಯಾತ್ರೆಯ ಉದ್ದೇಶ ಎಂದರು.

ತಾಲೂಕು ಬಿಜೆಪಿ ಅಧ್ಯಕ್ಷ ವಕೀಲ ಯತೀಶ್ ಮಾತನಾಡಿ, ಧರ್ಮಸ್ಥಳ ಎಂಬ ಹೆಸರಿನಲ್ಲಿ ಒಂದು ರೀತಿಯ ದೈವಶಕ್ತಿ ಅಡಗಿದೆ. ಅದಲ್ಲದೆ ಲಕ್ಷಾಂತರ ಮಹಿಳೆಯರ ಸಬಲೀಕರಣಕ್ಕೆ ಧರ್ಮಸ್ಥಳ ಸಂಘ ಆರ್ಥಿಕ ಸಹಾಯ ಮಾಡಿದೆ. ಕೆರೆಗಳ ಪುನರ್ಚೇತನ, ದೇವಾಲಯಗಳ ಜೀವನೋದ್ಧಾರ ಜತೆಗೆ ಸಂಘದ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಆರ್ಥಿಕ ನೆರವು ಹೀಗೆ ಹಲವಾರು ರೀತಿಯಲ್ಲಿ ಧರ್ಮಸ್ಥಳ ಶ್ರೀಕೇತ್ರದಿಂದ ಸಮಾಜಕ್ಕೆ ಅನೇಕ ಕೊಡುಗೆ ನೀಡಲಾಗಿತ್ತೊದೆ ಎಂದರು.

ಭರತ್ ಕೆಂಪರಾಜು ಮಾತನಾಡಿ, ಸುಳ್ಳು ಪ್ರಕರಣ ನಂಬಿ ಈಗಾಗಲೇ ಧರ್ಮಸ್ಥಳದ ಮಣ್ಣನ್ನು ಅಗೆದು ಅಪವಿತ್ರ ಮಾಡಲಾಗಿದೆ. ರಾಜ್ಯ ಸರ್ಕಾರವು ಎಸ್‌ಐಟಿ ರಚನೆ ಮಾಡುವ ಮುಂಚೆ ತನಿಖೆ ನಡೆಸಬೇಕಾಗಿತ್ತು. ಕೇವಲ ಯಾರದೋ ಹೇಳಿಕೆಯನ್ನು ಪರಿಗಣಿಸಿ ಎಸ್‌ಐಟಿ ರಚನೆ ಮಾಡಿ. ಇಷ್ಟು ದಿನಗಳ ಕಾಲ ಶೋಧ ನಡೆಸಿ ಕ್ಷೇತ್ರವನ್ನು ಅಪವಿತ್ರ ಮಾಡಿದ್ದಾರೆ. ಇದನ್ನು ನಾವು ಖಂಡಿಸುತ್ತೇವೆ. ಇಂತಹ ದುಷ್ಕೃತ್ಯಗಳನ್ನು ಎಂದೆಂದಿಗೂ ಮಾಡಬಾರದು. ಇದಕ್ಕೆ ಕಾರಣರಾದ ಅವರನ್ನು ಅತಿ ಶೀಘ್ರ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಮುಖಂಡರಾದ ವಿರೂಪಾಕ್ಷಪ್ಪ, ಕುಮಾರ್, ಆನಂದ್ ಗುಪ್ತ, ಉಮಾಶಂಕರ್, ಲೀನಾ ಬಾಬು, ಕಿರಣ್, ಸಿಂಧು ಸೇರಿದಂತೆ ಧರ್ಮಸ್ಥಳ ಸಂಘದ ಸದಸ್ಯರು ಹಾಗೂ ಹಲವು ಮಹಿಳಾ ಸಂಘ ದವರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net