ಉಪ ರಾಷ್ಟ್ರಪತಿಗೆ ಅಪಮಾನ: ಖಂಡನೆ

22-12-Shiva-3
ಉಪ ರಾಷ್ಟ್ರಪತಿಗೆ ಅಪಮಾನ ಮಾಡಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ರಾಯಚೂರಿನ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು. ನಗರ ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಮುಖಂಡರಾದ ರವೀಂದ್ರ ಜಲ್ದಾರ್, ಶ್ರೀನಿವಾಸರೆಡ್ಡಿ, ಡಾ.ನಾಗರಾಜ ಭಾಲ್ಕಿ, ಚಂದ್ರಶೇಖರ, ನಾರಾಯಣರಾವ್, ವಿಜಯರಾಜೇಶ್ವರಿ, ವೈ.ಗೋಪಾಲರೆಡ್ಡಿ ಇದ್ದರು.
Published on

ರಾಯಚೂರು: ಸಂವಿಧಾನಿಕ ಹುದ್ದೆಯಲ್ಲಿರುವ ಉಪ ರಾಷ್ಟ್ರಪತಿ ಜಗದೀಪ ಧನಕರ್‌ರನ್ನು ಅಪಮಾನಿಸಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಘಟಕದಿಂದ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ತೃಣಮೂಲ ಕಾಂಗ್ರೆಸ್‌ನ ಕಲ್ಯಾಣ ಬ್ಯಾನರ್ಜಿ ಉಪ ರಾಷ್ಟ್ರಪತಿಗಳಿಗೆ ಅಪಹಾಸ್ಯ ಮಾಡಿದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂ ವಿಡಿಯೋ ಚಿತ್ರೀಕರಣ ಮಾಡಿ ಅಪಮಾನಿಸಿದ್ದಾರೆ. ಸಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿ ಬಗ್ಗೆ ಅಪಹಾಸ್ಯ ಮಾಡಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ನಗರ ಶಾಸಕ ಡಾ.ಶಿವರಾಜ ಪಾಟೀಲ್, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಮುಖಂಡರಾದ ರವೀಂದ್ರ ಜಲ್ದಾರ್, ಶ್ರೀನಿವಾಸರೆಡ್ಡಿ, ಡಾ.ನಾಗರಾಜ ಭಾಲ್ಕಿ, ಚಂದ್ರಶೇಖರ, ನಾರಾಯಣರಾವ್, ವಿಜಯರಾಜೇಶ್ವರಿ, ವೈ.ಗೋಪಾಲರೆಡ್ಡಿ, ಪಿ.ಯಲ್ಲಪ್ಪ, ವಿಷ್ಣುವರ್ಧನರೆಡ್ಡಿ, ಯು.ನರಸರೆಡ್ಡಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net