

ಕೊಳ್ಳೇಗಾಲ : ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತರೊಂದಿಗೆ ಅಸಭ್ಯವಾಗಿ ವರ್ತಿಸಿರುವುದನ್ನು ಖಂಡಿಸಿ ಭಾನುವಾರ ತಾಲೂಕು ರೈತ ಸಂಘದ ಪದಾಧಿಕಾರಿಗಳು ಪಟ್ಟಣದಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.
ತಾಲೂಕಿನ ಸತ್ತೇಗಾಲ ಬೈಪಾಸ್ ಹೆದ್ದಾರಿ ಜಂಕ್ಷನ್‌ನಲ್ಲಿ ಜಮಾಯಿಸಿದ್ದ ರೈತ ಸಂಘದ ಪದಾಧಿಕಾರಿಗಳು ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಮನಗರದಲ್ಲಿ ರೈತರು ಪ್ರತಿಭಟಿಸುತ್ತಿದ್ದ ವೇಳೆ ಸ್ಥಳಕ್ಕೆ ಆಗಮಿಸಿದ ಡಿಕೆ ಶಿವಕುಮಾರ್ ಅವರು ರೈತರೊಂದಿಗೆ ಸೌಮ್ಯವಾಗಿ ನಡೆದುಕೊಂಡಿಲ್ಲ. ಪ್ರತಿಭಟನೆಕಾರರ ಉದ್ದೇಶ ನಾನು ಹೆದರುವುದಿಲ್ಲ, ಜಗ್ಗುವುದಿಲ್ಲ ಎಂದೇಳಿ ರೈತರಿಗೆ ಬೆದರಿಕೆ ಹಾಕುವ ರೀತಿ ಮಾತನಾಡಿದ್ದು ರೈತ ಸಂಘ ಇದನ್ನು ಖಂಡಿಸುತ್ತದೆ. ರಾಜ್ಯದ ಉಪ ಮುಖ್ಯಮಂತ್ರಿಗಳಾಗಿ ಈ ರೀತಿ ಮಾತನಾಡುವುದು ಎಷ್ಟು ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಮಾತನಾಡಿ, ರೈತರೊಟ್ಟಿಗೆ ಅಸಭ್ಯವಾಗಿ ವರ್ತಿಸಿದ್ದು. ಡಿಕೆಶಿ ಈ ಕೂಡಲೇ ರೈತರ ಕ್ಷಮೆ ಯಾಚನೆ ಮಾಡಬೇಕು. ಇಲ್ಲವೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಕಾಯಂ ಸದಸ್ಯ ರವಿನಾಯ್ಡು, ಜಿಲ್ಲಾ ಮಹಿಳಾ ಅಧ್ಯಕ್ಷೆ ಮಾದಮ್ಮ, ತಾಲೂಕು ಉಪಾಧ್ಯಕ್ಷ ಚಾರ್ಲಿ, ಸತ್ತೇಗಾಲ ಗ್ರಾಮ ಘಟಕ ಅಧ್ಯಕ್ಷ ಮಹದೇವ, ಚಿಕ್ಕಲ್ಲೂರು ಗ್ರಾಮ ಘಟಕ ಕಾರ್ಯದರ್ಶಿ ಕುಮಾರ್, ಇಕಡಹಳ್ಳಿ ಮಹದೇವಪ್ಪ, ಶಿವಕುಮಾರ್, ದಿವ್ಯಾ ಕುಮಾರ್, ರುಕ್ಕಿ ಬಾಯಿ, ಯುವ ಘಟಕ ಸಂಚಾಲಕ ಗುಣ, ಜೋಸೆಫ್, ಸೇಸುರಾಜ್, ಶಿವಲಿಂಗ, ಕೃಷ್ಣಪ್ಪ, ನಾಗಣ್ಣ, ನಂಜನಾಯಕ, ರಾಮೇಗೌಡ, ಪುಟ್ಟೇಗೌಡ ಮತ್ತಿದ್ದರಿದ್ದರು.