ಚಂದ್ರಬಾಬು ನಾಯ್ಡು ಬಂಧನಕ್ಕೆ ಖಂಡನೆ

BLY- 17-5
ತೆಲುಗು ದೇಶಂ ಪಕ್ಷದ ರಾಷ್ಟ್ರಿಯ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ಬಳ್ಳಾರಿ ನಗರದಲ್ಲಿ ಭಾನುವಾರ ವಿವಿಧ ಸಂಘಟನೆಗಳ ಕಾರ್ಯಕರ್ತರು, ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಮುಖಂಡರಾದ ಗುರ‌್ರಂ ಲಾಲ್ ಮೋಹನ್, ಕೋನಂಕಿ ರಾಮಪ್ಪ, ಕುಡತಿನಿ ಶ್ರೀನಿವಾಸ್ ಇತರರಿದ್ದರು.
Published on

ಬಳ್ಳಾರಿ : ತೆಲುಗು ದೇಶಂ ಪಕ್ಷದ ರಾಷ್ಟ್ರಿಯ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ಬಳ್ಳಾರಿ ನಗರದಲ್ಲಿ ಭಾನುವಾರ ವಿವಿಧ ಸಂಘಟನೆಗಳ ಕಾರ್ಯಕರ್ತರು, ಅಭಿಮಾನಿಗಳು ಪ್ರತಿಭಟನೆ ನಡೆಸಿದರು.

ಈ ವೇಳೆ ಸಿಬಿಎನ್ ಸಂಘದ ಸದಸ್ಯ ಕುಡತಿನಿ ರಾಮು ಮಾತನಾಡಿ, ದೂರದೃಷ್ಟಿ ವುಳ್ಳ ನಾಯಕ, ಅಭಿವೃದ್ಧಿಯ ಸ್ಪಷ್ಟ ಕಲ್ಪನೆ ಹೊಂದಿರುವ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿರುವುದು ಖಂಡನೀಯ. ಅವರ ಮೇಲೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಅವರು ದ್ವೇಷದ ರಾಜಕಾರಣದಿಂದ ಬಂಧಿಸಿದ್ದಾರೆ. ಇಡಿ, ಸಿಬಿಐ ಮುಂತಾದ ಕೇಸ್‌ಗಳನ್ನು ಎದುರಿಸುತ್ತಿರುವ ಸಿಎಂ ಜಗನ್ ಅವರು ಮುಂದಿನ ಚುನಾವಣೆ ಹಿನ್ನೆಲೆ ಮಾಜಿ ಸಿಎಂ ನಾಯ್ಡು ವಿರುದ್ಧ ಕೇಸ್ ದಾಖಲಿಸಿ, ಬಂಧಿಸಿರುವುದು ಸರಿಯಲ್ಲ ಎಂದು ತಿಳಿಸಿದರು.

ಛೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸಿ.ಶ್ರೀನಿವಾಸ್‌ರಾವ್ ಮಾತನಾಡಿ, ಗುಜರಾತ್ ಮಾದರಿಯಿಂದಾಗಿ ಮೋದಿ ಪ್ರಧಾನಿ ಆಗಿದ್ದಾರೆ. ಅದೇ ರೀತಿ ಕನಸು ಕಂಡಿದ್ದ ಚಂದ್ರಬಾಬು ನಾಯ್ಡು ಅವರ ವಿರುದ್ಧ ಇಲ್ಲಸಲ್ಲದ ಕೇಸ್‌ಗಳನ್ನು ದಾಖಲಿಸಿ ಜೈಲಿಗೆ ಕಳುಹಿಸಿದ್ದಾರೆ ಎಂದರು.

ನಾಯ್ಡು ಅವರು ಹೈದರಾಬಾದ್‌ಅನ್ನು ಐಟಿ-ಬಿಟಿ ಹಬ್ ಆಗಿ ನಿರ್ಮಿಸುವ ಮೂಲಕ ದೇಶಕ್ಕೆ ಮಾದರಿಯಾಗಿದ್ದಾರೆ. ಅನೇಕ ಯುವ ಜನರಿಗೆ ಉದ್ಯೋಗ ಅವಕಾಶವನ್ನು ಒದಗಿಸಿಕೊಟ್ಟಿದ್ದಾರೆ. ಅಂತಹ ನಾಯಕನನ್ನು ಬಂಧಿಸಿರುವುದು ಖಂಡನೀಯ ಎಂದರು.

ಬಿಲ್‌ಗೇಟ್ಸ್ ಅವರಂತಹ ಮಹಾನ್ ವ್ಯಕ್ತಿಗಳು ಹೈದರಾಬಾದ್‌ಗೆ ಬಂದು ಅಲ್ಲಿನ ಐಟಿ-ಬಿಟಿ ಕಂಪನಿಗಳನ್ನು ಕಂಡು ನಾಯ್ಡು ಅವರನ್ನು ಬಹಿರಂಗವಾಗಿಯೇ ಹೊಗಳಿದ್ದರು. ಅಂತಹ ವ್ಯಕ್ತಿಯ ಮೇಲೆ ಆರೋಪ ಮಾಡಿ ಜೈಲಿಗೆ ಕಳುಹಿಸಿರುವ ದ್ವೇಷದ ರಾಜಕಾರಣವನ್ನು ಜಗನ್ ಕೈ ಬಿಡಬೇಕು. ಮುಂದಿನ ಚುನಾವಣೆಯಲ್ಲಿ ಆಂಧ್ರದ ಜನರು ಅವರಿಗೆ ಸರಿಯಾದ ಬುದ್ಧಿ ಕಲಿಸಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖಂಡರಾದ ಗುರ‌್ರಂ ಲಾಲ್ ಮೋಹನ್, ಕೋನಂಕಿ ರಾಮಪ್ಪ, ಕುಡತಿನಿ ಶ್ರೀನಿವಾಸ್, ದಾಮೋದರ್, ವಿಷ್ಣು, ವಿಕ್ಕಿ, ಈಶ್ವರಯ್ಯ, ರಜನಿ, ರಮಪ್ರಭ, ರಾಮಬ್ರಹ್ಮ, ಶ್ರೀನಿವಾಸ್‌ರಾವ್, ಕೊನಂಕಿ ತಿಲಕ್, ರಾಮಾಂಜನೇಯಲು, ಅಲವೇಲು ಸುರೇಶ್, ಅಮರನಾಥ ಚೌಧರಿ ಸೇರಿದಂತೆ ಸಿಬಿಎನ್ ಅಭಿಮಾನಿಗಳ ಸಂಘ, ಬಳ್ಳಾರಿ ತೆಲುಗು ಸಂಘ, ಎನ್‌ಟಿಆರ್ ಅಭಿಮಾನಿಗಳ ಸಂಘ, ನಂದಮೂರಿ ಅಭಿಮಾನಿಗಳ ಸಂಘ, ಪವನ್ ಕಲ್ಯಾಣ್ ಅಭಿಮಾನಿಗಳ ಸಂಘದ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net