ಬಸ್ ಟಿಕೆಟ್ ದರ ಏರಿಕೆಗೆ ಖಂಡನೆ

5 hkr 2
Published on

ಹಿರೇಕೆರೂರ: ಬಸ್ ಪ್ರಯಾಣ ದರ ಏರಿಕೆ ಮಾಡಿರುವುದನ್ನು ವಿರೋಧಿಸಿ ಅಖಿಲ ಕರ್ನಾಟಕ ರೈತ ಸಂಘದ ವತಿಯಿಂದ ಪಟ್ಟಣದ ಕೆಎಸ್​ಆರ್​ಟಿಸಿ ಡಿಪೋ ಎದುರು ಪ್ರತಿಭಟನೆ ನಡೆಸಲಾಯಿತು.

ರೈತ ಸಂಘದ ಅಧ್ಯಕ್ಷ ಹನುಮಂತಪ್ಪ ದಿವಗೀಹಳ್ಳಿ ಮಾತನಾಡಿ, ಶೇ. 15ರಷ್ಟು ಬಸ್ ದರ ಏರಿಕೆ ಮಾಡಿರುವುದು ಖಂಡನೀಯವಾಗಿದೆ. ಮೂರ್ನಾಲ್ಕು ವರ್ಷಗಳಿಂದ ಅತಿವೃಷ್ಟಿ, ಅನಾವೃಷ್ಟಿಗೆ ರೈತರು ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಬೆಲೆ ಹೆಚ್ಚಳ ಮಾಡಿರುವುದು ಯಾವ ನ್ಯಾಯ?. ಕೂಡಲೇ ಟಿಕೆಟ್ ದರ ಇಳಿಸಬೇಕು ಎಂದು ಆಗ್ರಹಿಸಿದರು. ಡಿಪೋ ಸಂಚಾರಿ ನೀರಿಕ್ಷಕ ಗಣೇಶ ಊರಣಕರ್ ಅವರಿಗೆ ಮನವಿ ಸಲ್ಲಿಸಲಾಯಿತು. ಬಸವರಾಜ ಕೋಡಿಹಳ್ಳಿ, ರಮೇಶ ಒಬಳ್ಳೇರ, ಶಾರದಮ್ಮ ಮೇಗಳಮನಿ, ಸಚಿನ್ ಹುಬ್ಬಳ್ಳೇರ, ಪ್ರಕಾಶ ಹುಬ್ಬಳ್ಳೇರ ಹಾಗೂ ರೈತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net